Friday, February 3, 2012

ನನ್ನ ಗುರು ಎಂ.ವಿ.ಚಕ್ರಪಾಣಿ ಕುರಿತ ನಾನು ಬರೆದ ಪುಸ್ತಕ



          ಎಲೆ ಮರೆಯ ಕಾಯಾಗಿ ಉಳಿವವರ ಸಂಖ್ಯೆ ನಮ್ಮಲ್ಲಿ ಹೆಚ್ಚು. ಅದೇ ರೀತಿ ಎಲೆ ಮರೆಯ ಹೂವಾಗಿ, ಸುಂದರವಾಗಿ ಅರಳಿ, ತನ್ನ ಕಂಪನ್ನು ಸೂಸಿ, ಬೇಗನೆ ಮುದುಡಿದ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಎಂ ವೆಂಕಟಕೃಷ್ಣ ಅವರು ಸಾಹಿತ್ಯ ರಂಗದಲ್ಲಿ ಎಂ.ವಿ.ಚಕ್ರಪಾಣಿ ಎಂದು ಪ್ರಸಿದ್ಧರಾದವರು. ಅವರ ಪ್ರಗತಿಪರ ಚಿಂತನೆಗಳು, ಬರವಣಿಗೆಯ ಶೈಲಿ, ಬದುಕಿನ ಹಾದಿಯನ್ನು ಸಂಕ್ಷಿಪ್ತವಾಗಿ ಪರಿಚಯಿಸಿಸಲು ನಾನು ಬರೆದ ಚಿಕ್ಕ ಕೃತಿ ಇತ್ತೀಚೆಗೆ ನಮ್ಮ ತಾಲೂಕಿನ ಶ್ರೀಕ್ಷೇತ್ರ ನಂದಿಪುರದ ನುಡಿಹಬ್ಬ(ದಿ-2/2/12) ರಂದು ಅನೇಕ ಹಿರಿಯರ ಸಮ್ಮುಖದಲ್ಲಿ ಲೋಕಾರ್ಪಣೆ ಗೊಂಡಿತು. ನನ್ನ ಬದುಕಿನ ಸುಮುಧುರ ಘಳಿಗೆಯಲ್ಲಿ ಇದೂ ಒಂದು. ಚಕ್ರಪಾಣಿ ಸರ್ ನಿಮಗೆ ನನ್ನ ಚಿಕ್ಕ ಗುರುದಕ್ಷಿಣಿ.

No comments:

Post a Comment