Thursday, October 13, 2016

ವಾರ್ತ ಮತ್ತು ಪ್ರಸಾರ ಸಚಿವಾಲಯದ ಯೋಜನಾ ಫೆಬ್ರವರಿ ತಿಂಗಳ ಮಾಸ ಪತ್ರಿಕೆಯು ಆರೋಗ್ಯ ಕುರಿತಾಗಿದ್ದು ಅದರಲ್ಲಿ ಮಕ್ಕಳ ಆರೋಗ್ಯ ಕುರಿತು ಮಾಹಿತಿ ನೀಡುವ ನನ್ನ ಲೇಖನ ಪ್ರಕಟವಾಗಿದೆ. ಸಮಯ ಸಿಕ್ಕರೆ ಓದಿ ಪ್ರತಿಕ್ರಿಯಿಸಲು ವಿನಂತಿ. ಸೊಪ್ಪಿಮಠ್.




18/12/2015 article in vijayavani mastha about mind map---soppimata


ಜಯವಾಣಿ . ಮೈಂಡ್ ಮ್ಯಾಪ್ ಪರಮೇಶ್ವರಯ್ಯ ಸೊಪ್ಪಿಮಠ್.
ಹೊಸಪೇಟೆಯ ಸಾವಿತ್ರಕ್ಕ ನನಗೆ ಸದಾ ಕೇಳುವ ಪ್ರಶ್ನೆ ಎ೦ದರೆ, "ನನ್ನ ಮಗಳು ಯಾವಾಗಲೂ ಓದು-ಬರಹದಲ್ಲಿ ತೊಡಗಿರುತ್ತಾಳೆ. ಆದರೆ ಪ್ರಶ್ನೆ ಕೇಳಿದರೆ ಉತ್ತರ ಹೇಳುವುದೇ ಇಲ್ಲ. ಓದಿದ್ದನ್ನು ನೆನಪಿಟ್ಟುಕೊಳ್ಳುವ೦ತೆ ಮಾಡುವುದು ಹೇಗೆ?'
ಇದು ಆಕೆಯ೦ತೆ ಎಲ್ಲ ಪಾಲಕರ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸಹಜವಾಗಿ ಇದು ಸುಲಭದ ಕಾಯಕವೂ ಅಲ್ಲ. ಬಹಳ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು, ಹುಟ್ಟುವ ಪ್ರತಿಯೊ೦ದು ಮಗುವೂ ಬುದ್ಧಿವ೦ತಿಕೆಯಿ೦ದ ಕೂಡಿದ್ದು, ಸ್ವಾಭಾವಿಕವಾಗಿ ಕಲಿಕೆಯುವ ಸಾಮಥ್ಯ೯ ಹೊ೦ದಿರುತ್ತದೆ.
ಮಗು ಮಾತೃಭಾಷೆಯನ್ನು ಯಾವುದೇ ಪುಸ್ತಕಗಳಿ೦ದ ಕಲಿಯುವುದಿಲ್ಲ. ತನ್ನ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತ, ಅನುಕರಣೆ ಮಾಡುತ್ತ ಕಲಿಯುತ್ತದೆ. ಅನೇಕ ಸಾರಿ ಈ ಹಾದಿಯಲ್ಲಿ ತಪ್ಪೆಸಗುತ್ತದೆ. ನ೦ತರ ಅದನ್ನು ಸರಿಪಡಿಸಿಕೊಳ್ಳುತ್ತ, ಪ್ರಾಯೋಗಿಕವಾಗಿ ಉಚ್ಚರಿಸುತ್ತ, ಒತ್ತಿ ಒತ್ತಿ ಹೇಳುತ್ತ ಭಾಷೆಯನ್ನು ತನ್ನದನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅತ್ಯ೦ತ ಸೂಕ್ಷ್ಮವಾಗಿ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸುತ್ತ, ಪ್ರಪ೦ಚದ ಕುರಿತ ತನ್ನ ಭಾವನೆ-ಸ೦ಬ೦ಧಗಳನ್ನು ಗಟ್ಟಿಗೊಳಿಸುತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಪ೦ಚದ ಕುರಿತು ಜ್ಞಾನವನ್ನು ತನ್ನದೇ ಆದ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತ, ಸ೦ಗ್ರಹಿಸಿಕೊಳ್ಳುತ್ತಿರುತ್ತದೆ.
ಮಗು ಯಾವಾಗ ಶಾಲೆಯ ಮೆಟ್ಟಿಲು ಹತ್ತುತ್ತದೆಯೋ ಆಗಿನಿ೦ದಲೇ ಅದರ ಮೇಲೆ ಪಾಲಕರ ಒತ್ತಾಯ ಪ್ರಾರ೦ಭವಾಗುತ್ತದೆ. ಶಾಲೆಯಲ್ಲಿ ಮಗುವಿಗೆ ಕುಳಿತುಕೊಳ್ಳುವಿಕೆ ಇಷ್ಟವಿಲ್ಲದಿದ್ದರೂ ಕೂರಿಸಲಾರ೦ಭೀಸಿದಾಗ ಮಗು ತಪ್ಪುಮಾಡಲಾರ೦ಭೀಸುತ್ತದೆ. ಅದರ ಯೋಚನೆಗಳು ನಾವೆಣಿಸಿದ್ದಕ್ಕಿ೦ತ ವಿಭೀನ್ನ ಹಾದಿಯನ್ನು ತುಳಿಯಲಾರ೦ಭೀಸುತ್ತವೆ. ಅಲ್ಲಿ ಮಗುವಿಗೆ ಪಠ್ಯಪುಸ್ತಕವನ್ನು ಓದುವ೦ತೆ, ನೋಟ್ಸ್ ಬರೆಯುವ೦ತೆ ಒತ್ತಡ ಹಾಕುತ್ತೇವೆ. ಮಗುವಿಗೆ ಆಸಕ್ತಿಯೇ ಇಲ್ಲದಿರುವುದನ್ನು ಪದೇಪದೆ ನೆನಪು ಮಾಡಿಕೊಳ್ಳುವ೦ತೆ ಸೂಚಿಸುತ್ತೇವೆ. ಎಲ್ಲ ಪಾಲಕರಲ್ಲೂ ತಾವು ಹೇಳಿದ್ದನ್ನೇ ಮಗು ಅಭ್ಯಾಸ ಮಾಡಬೇಕೆ೦ಬ ಉತ್ಕಟ ಅಭೀಲಾಷೆ ಇರುತ್ತದೆ. ಇದನ್ನು ಪಾಲಕರು ಸರಿಯಾಗಿ ಮನನ ಮಾಡಿಕೊಳ್ಳುವವರೆಗೂ ಮಗು ಒ೦ದು ರೀತಿಯ ಹಿ೦ಸೆಯನ್ನು ಅನುಭವಿಸುತ್ತಿರುತ್ತದೆ. ಆದ್ದರಿ೦ದ ಪಾಲಕರೂ ಮಕ್ಕಳ ಭಾವನೆಗಳಿಗೆ ಸ್ಪ೦ದಿಸುವ ಗುಣ ಬೆಳೆಸಿಕೊಳ್ಳಬೇಕಿದೆ.
ಚಿತ್ರಗಳು ಚಿರಕಾಲ
ಮಗು ಜನಿಸಿದಾಗ ಅದರಲ್ಲಿ 120 ಬಿಲಿಯನ್ ನ್ಯೂರಾನ್‍ಗಳು ಇರುತ್ತವೆ. ಸರಿಯಾಗಿ ಬಳಕೆ ಮಾಡದೆ ಇರುವುದರಿ೦ದ 20 ವಷ೯ದ ಹೊತ್ತಿಗೆ 10 ಬಿಲಿಯನ್ ಮಾತ್ರ ಉಳಿಯುತ್ತವೆ. ಇವುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಾಗೃತ ಹಾಗೂ ಸುಪ್ತ ಮನಸ್ಸುಗಳಲ್ಲಿರುತ್ತವೆ. ಈ ಪ್ಯೆಕಿ ಎಚ್ಚರ ಮನಸಿನಿ೦ದ ಯಾವುದೇ ನಿಧಾ೯ರ ತೆಗೆದುಕೊ೦ಡರೆ ಸೆಕೆ೦ಡ್‍ವೊ೦ದಕ್ಕೆ ಸುಮಾರು ಎರಡು ಸಾವಿರ ನ್ಯೂರನ್‍ಗಳು ಮತ್ತು ಸುಪ್ತ ಮನಸಿನಲ್ಲಿ ತೆಗೆದುಕೊಳ್ಳುವ ನಿಶ್ಚಯಗಳಿ೦ದ ಸೆಕೆ೦ಡಿಗೆ ನಾಲ್ಕು ಬಿಲಿಯನ್ ನ್ಯೂರಾನ್‍ಗಳು ಬಿಡುಗಡೆಗೊಳ್ಳುತ್ತವೆ. ಒ೦ದು ವೇಳೆ ನಮ್ಮಲ್ಲಿನ ಉಭಯ ಮನಸ್ಸುಗಳಿಗೆ ಸೂಕ್ತ ಕೆಲಸ ನೀಡದಿದ್ದಲ್ಲಿ ಮಾನಸಿಕ ವೃದ್ಧಿಯಾಗುವುದಿಲ್ಲ. ಹಾಗಾಗಿ ಬಾಲ್ಯದಲ್ಲಿಯೇ ಮಗುವಿನ ವಿಕಸನಕ್ಕೆ ಆದ್ಯತೆ ನೀಡಬೇಕು. ಹಾಗೆ೦ದು ಒತ್ತಡ ಹೇರುವುದಲ್ಲ, ಸ೦ಪೂಣ೯ ಬೆಳವಣಿಗೆಗೆ ಆಸಕ್ತಿದಾಯಕ ವಿಧಾನಗಳಲ್ಲಿ ಮಗುವನ್ನು ತೊಡಗಿಸಿಕೊಳ್ಳುವ೦ತೆ ಮಾಡುವುದು ಪಾಲಕರ ಆದ್ಯ ಕತ೯ವ್ಯ.
ಮಿದುಳು ನಿದಿ೯ಷ್ಟ ರೀತಿಯ ಕಾರ್ಯವೈಖರಿಯನ್ನು ಹೊ೦ದಿದೆ. ಕಲಿಕೆ ಮತ್ತು ಕಲಿತದ್ದು ಉಳಿಯುವಿಕೆ ಪ್ರಕ್ರಿಯೆ ವಿಶೇಷವಾದದ್ದು. ಅದನ್ನು ಒತ್ತಾಯದಿ೦ದ ತುರುಕಿದರೆ ಯಾವ ಪ್ರಯೋಜನವೂ ಆಗುವುದಿಲ್ಲ. ಮಗುವಿನ ಮಿದುಳಿನಲ್ಲಿ ಅಕ್ಷರ ಮತ್ತು ಶಬ್ದಗಳ ಮುಖಾ೦ತರ ಯಾವುದೂ ನೆನಪಿನಲ್ಲುಳಿಯುವುದಿಲ್ಲ. ಅದು ಚಿತ್ರಗಳ ರೂಪದಲ್ಲೇ ಇರಬೇಕು. ಉದಾಹರಣೆಗೆ ಮಗುವಿಗೆ ಮಾವಿನಹಣ್ಣು ಎ೦ಬ ಶಬ್ದ ಹೇಳಿದರೆ ಅದು ದೀಘ೯ಕಾಲ ನೆನಪಿನಲ್ಲಿರುವುದಿಲ್ಲ. ಅದನ್ನೇ ಚಿತ್ರ/ವಸ್ತುವಾಗಿ ಕೈಲ್ಲಿಟ್ಟುಕೊ೦ಡು ಹೇಳಿದಾಗ ಅದು ಹೆಚ್ಚು ಕಾಲ ಉಳಿಯುತ್ತದೆ. ಈ ರೀತಿ ನಮ್ಮ ಮಿದುಳಿನ ಕಾರ್ಯವೈಖರಿ ಎ೦ಬುದು ಎಲ್ಲರಿಗೂ ತಿಳಿದಿದ್ದರೂ ನಾವು ಸಾ೦ಪ್ರದಾಯಿಕ ವಿಧಾನಕ್ಕೆ ಜೋತು ಬೀಳುತ್ತಿದ್ದೇವೆ.
ಮಗು ಆಟಿಕೆಯ೦ತಹ ಭೌತಿಕ ವಸ್ತುಗಳನ್ನು ಕುತೂಹಲದಿ೦ದ ಗಮನಿಸುತ್ತದೆ. ಅದನ್ನು ತಿರುಗಿಸಿ ಸ್ಪಶಾ೯ನುಭವ ಪಡೆಯುತ್ತದೆ. ಈ ಅನುಭವವನ್ನು ಅಭೀವ್ಯಕ್ತಿಸುವ ಶಬ್ದಗಳನ್ನು ಗುರುತಿಸಲು ಮಗುವಿಗೆ ನ೦ತರ ಹೆಚ್ಚು ಕಾಲ ಬೇಕಾಗಿಲ್ಲ. ನ೦ತರ ಅವುಗಳ ಚಿತ್ರಗಳನ್ನು ಗುರುತಿಸುತ್ತದೆ. ಬಹುಕಾಲದ ನ೦ತರ ಚಿತ್ರಗಳೊಡನೆ, ಅಕ್ಷರ ರೂಪದ ಪ್ರತೀಕಗಳನ್ನು ಸಮೀಕರಿಸಿಕೊಳ್ಳುತ್ತದೆ. ಮಕ್ಕಳ ಕಲಿಕೆಯಲ್ಲಿ ಚಿತ್ರಗಳು ಹೆಚ್ಚು ಮೌಲ್ಯ ಪಡೆಯುತ್ತವೆ.
ಮ್ಯೆ೦ಡ್‍ಮ್ಯಾಪ್
ನಾವು ಪ್ರಸ್ತುತ ಚಿ೦ತನೆ ಮಾಡಬೇಕಾದುದು ಮಕ್ಕಳ ಕಲಿಕೆಯು ತಕ೯ಬದ್ಧ, ಶಬ್ದ ಮತ್ತು ಗಣಿತಾತ್ಮಕವಾಗಿರಬೇಕು ಎ೦ಬುದರ ಕುರಿತಾಗಿದೆ. ಅ೦ದರೆ ಮಗು ಸ್ವತ೦ತ್ರವಾಗಿ ಯೋಚನೆ ಮಾಡುತ್ತ ವಿಷಯದ ಆಳಕ್ಕೆ ಇಳಿಯಬೇಕು. ಆಳಕ್ಕೆ ಹೋದ೦ತೆ ಸ೦ಗ್ರಹಣಾ ಮನೋಭಾವ ವೃದ್ಧಿಯಾಗಿ ಹೆಚ್ಚು ತಿಳಿವಳಿಕೆಯು೦ಟಾಗುತ್ತದೆ. ಈ ರೀತಿಯ ತಿಳಿವಳಿಕೆಯು ಹೆಚ್ಚುಕಾಲ ಉಳಿಯುತ್ತದೆ ಎ೦ಬುದನ್ನು ಶಿಕ್ಷಣತಜ್ಞರು ಪ್ರತಿಪಾದಿಸುತ್ತಾರೆ. ಮಗು ಈ ನಿಟ್ಟಿನಲ್ಲಿ ಸಾಗಬೇಕಾದರೆ ಮ್ಯೆ೦ಡ್‍ಮ್ಯಾಪ್ ನೆರವು ನೀಡುತ್ತದೆ. ರೋಮಾ೦ಚಕಾರಿ ಕಲ್ಪನೆಯು ಮಿದುಳಿನಲ್ಲಿ ಮಾಹಿತಿಯನ್ನು ಸ೦ಗ್ರಹಿಸುವಾಗ ಮ್ಯೆ೦ಡ್‍ಮ್ಯಾಪ್ ಪ್ರಮುಖ ಪಾತ್ರ ವಹಿಸುತ್ತದೆ.
ಮ್ಯೆ೦ಡ್ ಮ್ಯಾಪ್ ಆಲೋಚನೆ ಮತ್ತು ಕಲ್ಪನೆಗಳನ್ನು ಪ್ರತಿನಿಧಿಸುವ ಚಿತ್ರರೂಪವಾಗಿದೆ. ಈ ನಕ್ಷೆಯನ್ನು ಮಗು ನೋಡುತ್ತ ಚಿ೦ತನೆಯಲ್ಲಿ ತೊಡಗಿ ರಚನಾತ್ಮಕವಾಗಿ ಮಾಹಿತಿಯನ್ನು ಪಡೆಯುತ್ತದೆ. ಆ ಮೂಲಕ ವಿಶ್ಲೇಷಣೆ, ಹೋಲಿಕೆ, ನೆನಪು, ಹೊಸ ಯೋಚನೆಗೆ ಇದು ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ಸಮಯವನ್ನು ಉಳಿಸುವುದರ ಜತೆಗೆ ಪರಿಣಾಮಕಾರಿ ಓದಿಗೆ ತಳಹದಿಯಾಗಿ ಉತ್ತಮ ಫಲಿತಾ೦ಶವನ್ನು ನೀಡುತ್ತದೆ. ಮ್ಯೆ೦ಡ್‍ಮ್ಯಾಪ್ ನೋಟ್ಸ್ ಬರೆಯಲು, ಮಿದುಳನ್ನು ಕ್ರಿಯಾಶೀಲಗೊಳಿಸಲು, ಸಮಸ್ಯೆ ಪರಿಹರಿಸಲು, ಯೋಜನೆಗಳನ್ನು ಅಭ್ಯಾಸ ಮಾಡಲು, ಮಾಹಿತಿಗಳನ್ನು ವಿನಿಮಯ ಮಾಡಲು, ಸೃಜನಶೀಲತೆಯನ್ನು ಹೆಚ್ಚಿಸಲು ಮತ್ತು ಕಠಿಣ ವಿಷಯಗಳನ್ನು ಹೆಚ್ಚು ಮನನ ಮಾಡಕೊಳ್ಳಲು ನೆರವಾಗುತ್ತದೆ. ಒ೦ದು ಹಾಳೆಯಲ್ಲಿ ಆ ಪಾಠದ ಸ೦ಪೂಣ೯ ವಿಷಯಗಳನ್ನು ನೋಡಬಹುದಾಗಿದೆ. ಇದರಿ೦ದ ಓದುವಾಗ ಮಾಹಿತಿಯನ್ನು ವೇಗವಾಗಿ ಓದಲು ಮತ್ತು ನೆನಪಿಟ್ಟುಕೊಳ್ಳಲು ಇದು ಸಹಾಯಕವಾಗಿದೆ.
ಮ್ಯೆ೦ಡ್‍ಮ್ಯಾಪ್ ರಚನೆ ಹೇಗೆ?
ಒ೦ದು ಕ್ಷಣ ಕಣ್ಮುಚ್ಚಿಕೊ೦ಡು ಒ೦ದು ಗಿಡದ ಕುರಿತು ಯೋಚಿಸಿದಾಗ ಆ ಗಿಡಕ್ಕೆ ಸ೦ಬ೦˜ಸಿದ ಹಲವಾರು ಶಬ್ದಗಳು ನಮ್ಮ ಮನಸ್ಸಿನಲ್ಲಿ ಬರುತ್ತವೆ. ಸಾಮಾನ್ಯವಾಗಿ ಬರುವ ಶಬ್ದಗಳೆ೦ದರೆ ಸಸ್ಯ, ನೀರು, ದ್ಯುತಿಸ೦ಶ್ಲೇಷಣೆ, ಬೇರು, ಕಾ೦ಡ, ಮಣ್ಣು, ಬೆಳಕು, ಇ೦ಗಾಲದ ಡೈ ಆಕೆ್ಸ„ಡ್ ಇತ್ಯಾದಿ. ಈ ಶಬ್ದಗಳು ಅಥ೯ಬದ್ಧವಾಗಿದ್ದು, ಮನಸ್ಸಿನಲ್ಲಿ ಅವುಗಳ ಚಿತ್ರಗಳು ಮೂಡುವ ಕಾರಣ ಅವುಗಳನ್ನು ಕಾಲ್ಪನಿಕ ಶಬ್ದಗಳೆ೦ದು ಕರೆಯಲಾಗುತ್ತದೆ. ಕಲ್ಪನೆ ಎನ್ನುವುದು ಮನಸ್ಸಿನಲ್ಲಿ ಮೂಡುವ ಚಿತ್ರಗಳ ವಣ೯ನೆ ಎನ್ನಬಹುದು. ವಿಚಾರ ಅಥವಾ ಚಿತ್ರಣವು ನಾವು ಒ೦ದು ಶಬ್ದವನ್ನು ಅಥವಾ ವಿಷಯವನ್ನು ಕುರಿತು ಯೋಚಿಸಿದಾಗ ರೂಪುಗೊಳ್ಳುತ್ತದೆ. ಆಗ ಸ೦ಪೂಣ೯ ಮಾಹಿತಿಯನ್ನು ಕೆಲವೇ ಕೆಲವು ಶಬ್ದಗಳಲ್ಲಿ ಹಿಡಿದಿಡಬಹುದು.
ಮ್ಯೆ೦ಡ್‍ಮ್ಯಾಪ್ ರಚನೆಯನ್ನು ಸರಳವಾಗಿ ಹೇಳುವುದಾದರೆ, ನೋಟ್ಸ್ ಬರೆಯುವಾಗ ವಿಷಯ/ಶೀಷಿ೯ಕೆಯ ಚಿತ್ರವು ಪುಟದ ಮಧ್ಯದಲ್ಲಿರಲಿ. ನ೦ತರ ಅದಕ್ಕೆ ಪೂರಕವಾದ ಮುಖ್ಯಪದ (ಕೀ ವಡ್‍೯)ಗಳನ್ನು, ಸ೦ಖ್ಯೆ, ಆಕೃತಿ, ಚಿತ್ರಗಳು, ಬಣ್ಣ, ಸ೦ಕೇತಗಳನ್ನು ಸುತ್ತಲೂ ಬೇರೆ ಬೇರೆ ಬಣ್ಣಗಳಿ೦ದ ಬರೆಯಬೇಕು. ಅಲ್ಲಿ ವಿವರಣಾತ್ಮಕ ವಾಕ್ಯಗಳಿಗೆ ಅವಕಾಶವೇ ಇಲ್ಲ. ಅತ್ಯ೦ತ ಪ್ರಮುಖ ಪದಗಳನ್ನು ಗುರುತು ಮಾಡುವುದು, ಬಾಣದ ಗೆರೆ ಎಳೆಯುವುದರ ಮೂಲಕ ಇಲ್ಲವೇ ಯಾವುದೇ ರೀತಿಯಲ್ಲಿ ಒತ್ತು ನೀಡಿ ತಕ್ಷಣ ಎದ್ದು ಕಾಣುವ೦ತಿರಬೇಕು. ಅದರ ಕುರಿತು ಹೊಸ ಆಲೋಚನೆಗಳು ಬ೦ದರೆ ಸ೦ಗ್ರಹಿಸಿ ಅವನ್ನೂ ಗುರುತು ಹಾಕಿಕೊಳ್ಳಬೇಕು. ಅದು ಆಸಕ್ತಿದಾಯಕವಾಗಬೇಕಾದರೆ ಬಣ್ಣಗಳಿ೦ದ, ಚಿತ್ರಗಳಿ೦ದ, ಹೋಲಿಕೆ, ಸ೦ಬ೦ಧಗಳನ್ನು ಬಳಸುವುದರಿ೦ದ ಮಾತ್ರ ಸಾಧ್ಯವಾಗುತ್ತದೆ. ನ೦ತರ ಆ ಚಿತ್ರ ನೋಡಿದ ತಕ್ಷಣ ಎಲ್ಲವೂ ನೆನಪಿಗೆ ಬರುತ್ತದೆ. ಮಗುವನ್ನು ನೋಟ್ಸ್ ಮು೦ದೆ ಕುಳಿತುಕೊಳ್ಳುವ೦ತೆ ಮಾಡಲು ಇದು ಅತ್ಯ೦ತ ಸರಳ ಮಾಗ೯ವಾಗಿದೆ. ಮಕ್ಕಳು ವೈಯಕ್ತಿಕವಾಗಿಯೂ ಮ್ಯೆ೦ಡ್‍ಮ್ಯಾಪ್ ರಚಿಸಬಹುದು, ಕೆಲ ಸಾರಿ ಗು೦ಪಿನಲ್ಲಿ ಚಚಿ೯ಸುತ್ತ ಎಲ್ಲರೂ ಕೂಡಿ ರಚಿಸಿದರೂ ಹೆಚ್ಚಿನ ಪ್ರಯೋಜನವಾಗುತ್ತದೆ.
ಪ್ರಬ೦ಧ ಬರೆಯಬೇಕಾದಲ್ಲಿ ಅನೇಕರಿಗೆ ಎಲ್ಲಿ೦ದ ಪ್ರಾರ೦ಭೀಸಬೇಕು, ಹೇಗೆ ಮು೦ದುವರಿಸಬೇಕು ಮತ್ತು ಎಷ್ಟಕ್ಕೆ ಮುಕ್ತಾಯಗೊಳಿಸಬೇಕು ಎ೦ಬುದರ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಆದರೆ ಮ್ಯೆ೦ಡ್‍ಮ್ಯಾಪ್ ರಚಿಸುವವರಿಗೆ ಇದು ನೀರು ಕುಡಿದಷ್ಟು ಸುಲಭ. ಅನೇಕ ಯೋಜನೆಗಳಿ೦ದ ಒ೦ದು ವಿಷಯವನ್ನು ಎಲ್ಲ ಮಜಲುಗಳಲ್ಲಿ ಗಮನಿಸಿ ಉತ್ತಮ ಹೊ೦ದಾಣಿಕೆಯಿ೦ದ ಎಲ್ಲ ವಿಷಯಗಳನ್ನೊಳಗೊ೦ಡ ಪ್ರಬ೦ಧcv ರಚಿಸುತ್ತಾರೆ. ಇ೦ಥವರಿಗೆ ಪರೀಕ್ಷೆಗಳು ಸುಲಭವಾಗಿ, ಹೆಚ್ಚಿನ ಅ೦ಕಗಳನ್ನು ಪಡೆಯುತ್ತಾರೆ. ಈ ರೀತಿ ಬರವಣಿಗೆಯಿ೦ದ ಮು೦ದೆ ಕೆಲವರು ಸ್ಪೂತಿ೯ಗೊ೦ಡ ಕಥೆ, ಕವನ, ಕಾದ೦ಬರಿ, ಚಿತ್ರಕಲೆಗಳಲ್ಲಿ ಹೆಸರು ಮಾಡಬಹುದಾಗಿದೆ. ಒ೦ದು ಶಬ್ದ, ಚಿತ್ರ, ಅನುಭವ ಮು೦ದೆ ನೂರಾರು ಆಲೋಚನೆಗಳಿಗೆ ರಹದಾರಿಯಾಗುತ್ತದೆ. ಬಹಳ ಮುಖ್ಯವಾಗಿ ಸಮಸ್ಯೆಗಳು ಎದುರಾದಾಗ ಅದನ್ನು ವಿವಿಧ ದಾರಿಗಳಲ್ಲಿ ಗಮನಿಸಿ ಸರಳವಾಗಿ ಪರಿಹಾರ ಕ೦ಡುಹಿಡಿಯಲು ಮ್ಯೆ೦ಡ್‍ಮ್ಯಾಪ್ ನೆರವಾಗುತ್ತದೆ.
ಈಗಿರುವ ಸಾ೦ಪ್ರದಾಯಿಕ ವಿಧಾನಗಳಿ೦ದ ಹೊರಬ೦ದು ನೂತನ ಆವಿಷ್ಕಾರಗಳತ್ತ ಮನಸ್ಸು ಮಾಡಬೇಕಿದೆ. ಅದಕ್ಕೆ ಮಗು ವಿವಿಧ ಬಣ್ಣಗಳಲ್ಲಿ ಬರೆಯುವ೦ತೆ ಪ್ರೊೀತ್ಸಾಹ ಅಗತ್ಯ. ಅದರಲ್ಲಿ ಹೆಚ್ಚು ಆಕೃತಿ ಇದ್ದರೆ ಮನಸ್ಸಿನಾಳಕ್ಕೆ ಅದು ಇಳಿಯುತ್ತದೆ. ಈ ರೀತಿಯ ನವನವೀನ ಮಾದರಿಗಳು ಮಗುವಿನ ಬೌದ್ಧಿಕ ಸಾಮಥ್ಯ೯ವನ್ನು ಹಿಗ್ಗಿಸುವುದರ ಜೊತೆಗೆ ನೆನಪಿನ ಶಕ್ತಿಯನ್ನು ವಿಕಸಿಸುವುದರಲ್ಲಿ ಅನುಮಾನವೇ ಇಲ್ಲ. (ಲೇಖಕರು ಹಗರಿಬೊಮ್ಮನಹಳ್ಳಿಯಲ್ಲಿ ಕ್ಷೇತ್ರ ಸ೦ಪನ್ಮೂಲ ವ್ಯಕ್ತಿ)

ಸರಕಾರಿ ಶಾಲೆಗಳು ಕಡಿಮೆಯಲ್ಲಾ ಲೇಖನ ಜನಪದದಲ್ಲಿ......ಸರಕಾರಿ ಶಾಲೆ ಮತ್ತು ಶಿಕ್ಷಕರ ಕುರಿತು ನಕಾರಾತ್ಮಕ ಅಂಶಗಳೇ ಹೆಚ್ಚು ಚರ್ಚೆಯಾಗುತ್ತಿರುವ ಸಮಯದಲ್ಲಿ. ....ತಂಗಾಳಿಯಂತೆ ಸರಕಾರಿ ಶಾಲೆಗಳು ಹಾಗೂ ಶಿಕ್ಷಕರ ಸಾಧನೆಯನ್ನು ಪರಿಚಯಿಸುತ್ತಾ ನಾವೇನು ಕಮ್ಮಿ ಇಲ್ಲ ಎನ್ನುವಂತ ಲೇಖನ ಈ ಸೆಪ್ಟೆಂಬರ್ ತಿಂಗಳ ಜನಪದ ಮಾಸ ಪತ್ರಿಕೆಯಲ್ಲಿ .....ಶಿಕ್ಷಕರ ದಿನಾಚರಣೆ ಸಮಯದಲ್ಲಿ ಮಕ್ಕಳ ಕನಸಿಗೆ ಬಣ್ಣ ಹಚ್ಚುತ್ತಿರುವ ಎಲ್ಲಾ ಗುರುಗಳಿಗೆ ಅರ್ಪಣೆ.







ರಚನಾವಾದದ ಕುರಿತ ಲೇಖನ ಜೂನ್ ಜುಲೈ2016ರ ಶಿಕ್ಷಣವಾರ್ತೆಯಲ್ಲಿ



ಇಂಗ್ಲೀಷ್ ಮೇಳ ಕುರಿತ ಲೇಖನ ಶಿಕ್ಷಣವಾರ್ತೆ ಮಾರ್ಚ್ 2016ರಲ್ಲಿ



ಭಾರತ ಪ್ರವಾಸಿ ದಿನ ಕುರಿತ ವಿಶ್ವವಾಣಿ ಸಂಪಾದಕೀಯದಲ್ಲಿ ಪ್ರಕಟವಾದ 25/1/2016 ಲೇಖನ


8/1/2016ರ ವಿಜಯವಾಣಿ ಮಸ್ತ ಪುರವಣಿಯಲ್ಲಿ ನಲಿಕಲಿ ಕುರಿತ ನನ್ನ ಲೇಖನ


ಲಿ-ಕಲಿ ಒಂದು ಅವಲೋಕನ
ಪರಮೇಶ್ವರಯ್ಯ ಸೊಪ್ಪಿಮಠ
ಶಿಕ್ಷಣ ಕ್ಷೇತ್ರದಲ್ಲಿ ಸಣ್ಣ ವ್ಯತ್ಯಾಸ/ಬದಲಾವಣೆಯಾದರೂ ದೊಡ್ಡಮಟ್ಟದ ಚರ್ಚೆಯಾಗುತ್ತದೆ. ಇದು ಉತ್ತಮ ಬೆಳವಣಿಗೆಯೂ ಹೌದು. ಪ್ರಸ್ತುತ 1ರಿಂದ 3ನೇ ತರಗತಿವರೆಗಿನ ಬೋಧನಾ ವಿಧಾನವಾದ ಲಿ-ಕಲಿ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳು ಕೇಳಿಬರುತ್ತಿದೆ. ಹೀಗಾಗಿ ಈ ಪದ್ಧತಿಯ ಸಾಧಕ, ಬಾಧಕಗಳ ಸಂಪೂರ್ಣ ಅವಲೋಕನ ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ ಕಿರಿಯ ಪ್ರಾಥಮಿಕ ಹಂತದಲ್ಲಿ ಎರಡು ರೀತಿಯ ಶಿಕ್ಷಣ ಪದ್ಧತಿ ಇದೆ, ಕಲಿ- ಲಿ ಹಾಗೂ ನಲಿಫ್ಕಲಿ. ಖಾಸಗಿ ಶಾಲೆಗಳಲ್ಲಿ ಕಲಿ- ಲಿ ಪದ್ಧತಿಯಾದರೆ, ಸರ್ಕಾರಿ ಶಾಲೆಗಳಲ್ಲಿ ಕಲಿ- ಲಿ ವಿಧಾನದ ಬೋಧನೆ. ಎರಡು ಶಾಲೆಗಳೂ ರಾಜ್ಯ ಸರ್ಕಾರದ ಅಡಿಯಲ್ಲೇ ಬರುತ್ತವೆ.
ಆದರೂ ದ್ವಿಮುಖ ನೀತಿ ಏಕೆ? ಇದು ತಾರತಮ್ಯವಲ್ಲವೇ? ಎಲ್ಲ ಶಾಲೆಗಳಲ್ಲೂ ಒಂದೇ ರೀತಿಯ ವಿಧಾನ ಅಳವಡಿಸಲಿ ಎಂಬುದು ಬಹುತೇಕರ ವಾದ. ಆದರಿದು ಕಾರ್ಯರೂಪಕ್ಕೆ ಬಂದಿಲ್ಲ.ವ್ಯತ್ಯಾಸ ಏನು?ಕಲಿಫ್ನಲಿ ವಿಧಾನದಲ್ಲಿ ಪಠ್ಯಪುಸ್ತಕಗಳು ಮುಖ್ಯ ಪಾತ್ರವಹಿಸುತ್ತವೆ. ಶಿಕ್ಷಕರು ಬೋಧನೆಮಾಡುತ್ತಾರೆ. ಈ ಮೂಲಕ ಮಕ್ಕಳಿಗೆ ವಿದ್ಯೆ ಹೇಳಿಕೊಡುತ್ತಾರೆ. ಇದು ಸಹಜ ಪ್ರಕ್ರಿಯೆ. ಆದರೆ ನಲಿಫ್ಕಲಿ ಸಂಪೂರ್ಣ ವಿಭಿನ್ನ. ಶಿಶುಕೇಂದ್ರಿತ, ಚಟುವಟಿಕೆ ಆಧಾರಿತ, ಸ್ವಕಲಿಕೆ, ಸಂತಸದ ಕಲಿಕೆಗೆ ಒತ್ತು ಕೊಡುವ ವಿಶಿಷ್ಟ ಪದ್ಧತಿಯಿದು. ಇದರಲ್ಲಿ ಪಠ್ಯಪುಸ್ತಕಗಳು ಇರುವುದಿಲ್ಲ, ಬದಲಿಗೆ ಕಲಿಕಾ ಸಾಮಗ್ರಿಗಳು ಇರುತ್ತವೆ. ಇದರಲ್ಲಿ ಉಪಯೋಗಿಸುವ ಕಾರ್ಡ್ ಮತ್ತಿತರ ವಸ್ತುಗಳನ್ನು ಹೊರಗಿನಿಂದ ತರುವುದಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಯಾರಿಸುತ್ತಾರೆ. ಬೇಕಾಗುವ ವಸ್ತುಗಳ ಬಗ್ಗೆ, ಕಲಿಸುವ ವಿಧಾನಗಳನ್ನು ದೀರ್ಘ ಚರ್ಚೆ ಮಾಡುತ್ತಾರೆ. ಅನುಕೂಲ, ಅನಾನುಕೂಲಗಳನ್ನೂ ಗಮನದಲ್ಲಿಟ್ಟುಕೊಳ್ಳುತ್ತಾರೆ.
ಏಕಕಾಲದಲ್ಲಿ ಅನುಷ್ಠಾನವಾಗಿಲ್ಲ
ಲಿ-ಕಲಿ ಪದ್ಧತಿ ರಾಜ್ಯದೆಲ್ಲೆಡೆ ಒಂದೇ ಬಾರಿಗೆ ಅನುಷ್ಠಾನವಾಗಿಲ್ಲ. 1995-96ನೇ ಸಾಲಿನಿಂದ ಹಂತಹಂತವಾಗಿ ಶಾಲೆಗಳಲ್ಲಿ ಅಳವಡಿಸಲಾಗುತ್ತಿದೆ. 2009-10ರಲ್ಲಿ ಎಲ್ಲ ಶಾಲೆಗಳಲ್ಲಿ ಅನುಷ್ಠಾನವಾದರೂ 1 ಮತ್ತು 2ನೇ ತರಗತಿಗೆ ಮಾತ್ರ ಅಳವಡಿಸಲಾಗಿತ್ತು. ನಂತರ 2010-11ರಿಂದ 3ನೇ ತರಗತಿಗೂ ವಿಸ್ತರಿಸಲಾಗಿದೆ. 3ನೇ ತರಗತಿಗೆ ಅಳವಡಿಸಿದ ನಂತರವೇ ಅಪಸ್ವರ ಎದ್ದಿದ್ದು. ಈ ನಲಿಫ್ಕಲಿ ಪದ್ಧತಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಬಹುತೇಕ ರಾಜ್ಯಗಳಲ್ಲೂ ಇದೆ. ಆದರೆ ಬೇರೆ ಬೇರೆ ಹೆಸರಿನಲ್ಲಿದೆ. ಇದನ್ನು ಯುನಿಸೆಫ್ ಕೂಡ ಒಪ್ಪಿಕೊಂಡಿದೆ.
ಪದ್ಧತಿಯ ಉದ್ದೇಶ
ಮಕ್ಕಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಆಧಾರದ ಮೇಲೆ, ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯನ್ನಿಟ್ಟುಕೊಂಡು ಲಿ-ಕಲಿ ಜನ್ಮತಾಳಿದೆ. ಬಹುವರ್ಗ, ಬಹುಹಂತದ ಕಲಿಕೆ, ಕಲಿಕಾಂಶಗಳು, ಲೋಗೋ, ಕಾರ್ಡ್, ಅಭ್ಯಾಸ ಪುಸ್ತಕ, ವಾಚಕ, ಮೆಟ್ಟಿಲು, ಪ್ರಗತಿನೋಟ, ಗುಂಪುರಚನಾ ತಟ್ಟೆ, ವಿದ್ಯಾರ್ಥಿಯ ಕಪ್ಪುಹಲಗೆ, ಹವಾಮಾನ ನಕ್ಷೆ, ಕಲಿಕಾ ಚಪ್ಪರಗಳನ್ನು ಒಳಗೊಂಡಿದೆ. ಈ ಪದ್ಧತಿಯಲ್ಲಿ ಶಿಕ್ಷಕರಿಗೆ ಪ್ರತಿವರ್ಷ ತರಬೇತಿ ನೀಡಲಾಗುತ್ತದೆ. ಅನುಭವ ಹಂಚಿಕೆ ಕಾರ್ಯಾಗಾರ ನಡೆಸಲಾಗುತ್ತದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಸಹಾಯವಾಣಿಗಳಿಂದ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ. ಸಿಆರ್‌ಜಿ, ಬಿಆರ್‌ಜಿ ಮತ್ತು ಡಿಆರ್‌ಜಿ ಸಭೆಗಳನ್ನು ನಡೆಸಿ ಕಾರ್ಯತಂತ್ರ ರೂಪಿಸಲಾಗುತ್ತದೆ.
ನಲಿ-ಲಿ ಪದ್ಧತಿ ಸ್ವರೂಪ
ನಲಿ-ಕಲಿ 1, 2 ಹಾಗೂ 3ನೇ ತರಗತಿಗಳನ್ನು ಒಳಗೊಂಡ ಬಹುವರ್ಗ ಬೋಧನೆ. ಇಲ್ಲಿ ಒಂದು ಗುಂಪಿನ ಗರಿಷ್ಠ ಮಕ್ಕಳ ಸಂಖ್ಯೆ 30. ಸ್ವವೇಗ, ಬಹುವರ್ಗ, ಬಹುಹಂತ, ಸಾಮರ್ಥ್ಯ ಆಧಾರಿತ, ಚಟುವಟಿಕೆ ಆಧಾರಿತ, ಸಹಭಾಗಿತ್ವ ಕಲಿಕೆ ಎಂಬ ಮೂಲ ತಳಹದಿಯನ್ನಿಟ್ಟುಕೊಂಡು ನಲಿಫ್ಕಲಿ ರೂಪುಗೊಂಡಿದೆ. ವಿವಿಧ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಉತ್ತಮಗೊಳಿಸಬಹುದು. ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾರಂಭವಾಗುವ ಕಲಿಕೆಯು ಸಹಪಾಠಿಗಳ ನೆರವಿನಿಂದ ಬಲಗೊಳ್ಳುವುದು.
ಸರ್ಕಾರಿ ಶಾಲೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿರುತ್ತವೆ. ಅಲ್ಲಿನ ಪಾಲಕರಿಗೆ ನಲಿಫ್ಕಲಿ ಬಗ್ಗೆ ಸರಿಯಾದ ಮಾಹಿತಿಯಾಗಲಿ, ತಿಳಿವಳಿಕೆಯಾಗಲಿ ಇರುವುದಿಲ್ಲ. ಪಠ್ಯಪುಸ್ತಕ ಇಲ್ಲದ, ಬರೀ ಹಾಡು, ಕುಣಿತವಿರುವ ಈ ಪದ್ಧತಿಯಿಂದ ನಮ್ಮ ಮಕ್ಕಳಿಗೆ ಏನೂ ಪ್ರಯೋಜನವಿಲ್ಲ. ಎಲ್ಲ ರೀತಿಯ ಪ್ರಯೋಗಗಳಿಗೆ ಸರ್ಕಾರಿ ಶಾಲೆ ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಇದು ಸರಿಯಲ್ಲ.
| ಚಂದ್ರು, ಹೊಸಪೇಟೆಬೆಂಗಳೂರು
ಭಾಗದಲ್ಲಿರುವ ಸರ್ಕಾರಿ ಶಾಲೆಯಲ್ಲಿ 1,095 ಮಕ್ಕಳಿದ್ದಾರೆ. ಇದರಲ್ಲಿ 350ಕ್ಕೂ ಹೆಚ್ಚು ಮಕ್ಕಳು ನಲಿ-ಕಲಿ ವಿಭಾಗದಲ್ಲಿದ್ದು 8 ಕೊಠಡಿಗಳಲ್ಲಿ ಕಲಿಸಲಾಗುತ್ತದೆ. ಪಾಲಕರಿಗೆ ಅವರ ಮಗುವಿನ ಕಲಿಕೆ ಹೇಗಿದೆ, ಕೊರತೆ ಏನು, ಅದನ್ನು ಸರಿಪಡಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಿದ್ದೇವೆ. ಯಾವಾಗ ಬೇಕಾದರೂ ಶಾಲೆಗೆ ಬಂದು ತಮ್ಮ ಮಗುವಿನ ಕಲಿಕಾಮಟ್ಟ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯಾಸ ಪುಸ್ತಕ, ವಾಚಕ, ನೋಟ್ ಪುಸ್ತಕಗಳನ್ನು ಮನೆಗೊಯ್ಯಲು ಕೊಡುವುದರಿಂದ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ. ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಶಾಲೆಯೇ ಒದಗಿಸುವುದರಿಂದ ನಮಗೆ ಹೊರೆ ಕಡಿಮೆ ಆಗಿದೆ ಎಂದು ಪಾಲಕರೇ ಹೇಳಿದ್ದಾರೆ.
| ಪ್ರೀತಿ ಹೆಗಡೆ, ನಲಿಫ್ಕಲಿ ಸಂಪನ್ಮೂಲ ವ್ಯಕ್ತಿ
ನಲಿ-ಲಿ ಮೂಲಕ ಮಕ್ಕಳಲ್ಲಿ ಸಹಕಾರ, ನಾಯಕತ್ವ, ಪ್ರಶ್ನಿಸುವ, ಚರ್ಚಿಸುವ ಮನೋಭಾವಗಳಂಥ ಮೌಲ್ಯಗಳನ್ನು ಬೆಳೆಸಲಾಗುತ್ತದೆ. ಇದು ಕೇವಲ ಅಕ್ಷರ ಜ್ಞಾನವನ್ನು ಕೊಡುತ್ತಿಲ್ಲ. ಜತೆಗೆ ಕೌಶಲ, ಮೌಲ್ಯ, ಸೃಜನಶೀಲತೆಯನ್ನು ಬೆಳೆಸುತ್ತಿದೆ. ಅವರ ಭಾವಿ ಜೀವನಕ್ಕೆ ಅಗತ್ಯವಿರುವ ಅನೇಕ ಅಂಶಗಳನ್ನು ಕಲಿಸುತ್ತಿದೆ. ಶಿಕ್ಷಕರು, ಪಾಲಕರು, ಮಕ್ಕಳಿಗೆ ವರದಾನವಾಗಿದೆ.
| ಆರ್.ಡಿ. ರವೀಂದ್ರ, ರಾಜ್ಯ ಸಂಪನ್ಮೂಲ ವ್ಯಕ್ತಿ
ಮಕ್ಕಳಿಗೇನು ಅನುಕೂಲ?
ಹಿಂದೆಲ್ಲ ಕಲಿಕೆಯಲ್ಲಿ ಹಿಂದಿರಲಿ, ಚುರುಕಿರಲಿ; ಎಲ್ಲ ಮಕ್ಕಳನ್ನೂ ಒಂದೆಡೆ ಸೇರಿಸಿ ಪಾಠ ಹೇಳಲಾಗುತ್ತಿತ್ತು. ಆದರೆ ಈ ವಿಧಾನದಲ್ಲಿ ಅವರವರ ಕಲಿಕಾ ವೇಗಕ್ಕೆ ತಕ್ಕಂತೆ ಅವಕಾಶ ನೀಡುತ್ತಾರೆ. ಇದು ಮಕ್ಕಳ ಮೇಲೆ ಸ್ವಲ್ಪ ಋಣಾತ್ಮಕ ಪರಿಣಾಮವನ್ನೂ ಬೀರಬಹುದು. ಆದರೆ ಕಲಿಕೆ ಗಟ್ಟಿಯಾಗುತ್ತದೆ. ಪ್ರತಿಯೊಂದನ್ನೂ ಅನುಭವಾತ್ಮಕವಾಗಿ ಕಲಿಯಬಹುದು. ಹಾಗೆ ಕಲಿತಿದ್ದು ಅವರ ಮನಸ್ಸಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಕ್ಕಳು ತಮ್ಮ ಪ್ರಗತಿಯನ್ನು ತಾವೆ ಪಾರದರ್ಶಕವಾಗಿ ನೋಡಬಹುದು. ಸಾಧನೆ, ಕೊರತೆ, ಹೋಲಿಕೆಗೆ ಅವಕಾಶವಿದೆ. ಪರೀಕ್ಷೆಗಳ ಭಯವಿಲ್ಲದೆ ಆಟ, ಚಟುವಟಿಕೆಯೊಂದಿಗೆ ಕಲಿಯಲು ಈ ಪದ್ಧತಿ ಉತ್ತಮ.
ಶಿಕ್ಷಕರಿಗೇನು ಅನುಕೂಲ?
ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಹೇಳುವ ಪ್ರಕಾರ ನಲಿಫ್ಕಲಿ ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿದೆ. ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ. ಚಟುವಟಿಕೆಗಳ ವಿಂಗಡಣೆ ಮೊದಲೇ ನಿರ್ಧಾರವಾಗುವುದರಿಂದ ಆಯ್ಕೆಯಲ್ಲಿ ಗೊಂದಲವಾಗುವುದಿಲ್ಲ. ಅದಕ್ಕೆ ಬೇಕಾದ ಸಾಮಗ್ರಿಗಳನ್ನೂ ಮೊದಲೇ ಸಿದ್ಧಪಡಿಸುವುದರಿಂದ ಸಮಸ್ಯೆಯಾಗುವುದಿಲ್ಲ. ಪ್ರಗತಿಯ ಹೋಲಿಕೆ ಅಲ್ಲಲ್ಲಿಯೇ ನಡೆಯುವುದರಿಂದ ಸಾಧಕ, ಬಾಧಕಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ. ಪಾಠ, ಟಿಪ್ಪಣಿಗೆ ವಿನಾಯಿತಿ ಇರುವುದರಿಂದ ಸಮಯವೂ ಉಳಿಯುತ್ತದೆ. ದಾಖಲೀಕರಣಕ್ಕೆ ಹೆಚ್ಚು ಒತ್ತು ನೀಡದೆ, ಕಲಿಕೆಗೆ ಅವಕಾಶ ನೀಡಲಾಗಿದೆ. ಮೊದಲು ಶಿಕ್ಷಕರಿಗೆ ಚಟುವಟಿಕೆಯ ಆಧಾರದ ಮೇಲೆ ಕಲಿಸಲು ಸೂಚಿಸಲಾಗುತ್ತಿತ್ತು. ಆ ಚಟುವಟಿಕೆಗಳ ಆಯ್ಕೆಯನ್ನು ಶಿಕ್ಷಕರಿಗೇ ಬಿಟ್ಟಿದ್ದರಿಂದ ಅದು ಹೊರೆಯಾಗುತ್ತಿತ್ತು. ಆದರೆನಲಿಫ್ಕಲಿಯಲ್ಲಿ ಪ್ರತಿ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಹಾಗಾಗಿ ಶಿಕ್ಷಕರಿಗೆ ಸುಲಭವಾಗುತ್ತದೆ. ಅಷ್ಟೇ ಏಕೆ ನಲಿಫ್ಕಲಿ ಕೊಠಡಿಯನ್ನು ಒಂದು ಪುಟ್ಟ ಶೈಕ್ಷಣಿಕ ವಸ್ತು ಸಂಗ್ರಹಾಲಯದಂತೆ ಸಿದ್ಧಪಡಿಸುವುದರಿಂದ ಶಾಲೆಗಳ ಸೌಂದರ್ಯವೂ ಹೆಚ್ಚಿದೆ. ಕಲಿಕೆಗೆ ಪೂರಕ ವಾತಾವಾರಣ ನಿರ್ಮಾಣವಾಗಿದೆ ಎನ್ನುತ್ತಾರೆ ರವೀಂದ್ರ.
ಬಾಧಕಗಳೇನು?
ನಲಿಫ್ಕಲಿ ಬೋಧನಾ ಪದ್ಧತಿಯಲ್ಲಿ ಖಂಡಿತ ದೋಷಗಳಿಲ್ಲ. ಆದರೆ ಅದರ ಅನುಷ್ಠಾನ ಮತ್ತು ಅದಕ್ಕೆ ನೀಡಬೇಕಾದ ಸೌಲಭ್ಯಗಳಲ್ಲಿ ದೋಷಗಳಿವೆ. ಪ್ರತಿವರ್ಷ ಮಕ್ಕಳಿಗೆ ತಲುಪಲೇಬೇಕಾದ ಪ್ರಗತಿನೋಟ, ಕಾರ್ಡ್‌ಗಳು ಶಾಲೆಗೆ ಸರಿಯಾದ ಸಮಯಕ್ಕೆ    ತಲುಪುತ್ತಿಲ್ಲ. ನಲಿಫ್ಕಲಿಯಲ್ಲಿ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಎಂಬ ನಿಯಮವಿದೆ. ಆದರೆ ಮೂರು ತರಗತಿ ಮಕ್ಕಳನ್ನು ಸೇರಿಸಿದರೆ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿ ಸ್ವಲ್ಪ ತೊಡಕಾಗುತ್ತದೆ. ಇಂದಿಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲ. ಹಲವು ಕಡೆ 50ರಿಂದ 120 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದಾರೆ. ಶಿಕ್ಷಕರಿಗೆ ಮಕ್ಕಳ ಬಗ್ಗೆ ವೈಯಕ್ತಿಕ ಗಮನ ಹರಿಸಲು ಆಗುತ್ತಿಲ್ಲ. ಕೆಲವು ಶಾಲೆಗಳಲ್ಲಿ 3ನೇ ತರಗತಿ ಮಕ್ಕಳು 1ಮತ್ತು 2ನೇ ತರಗತಿ ಮಕ್ಕಳೊಂದಿಗೆ ಕುಳಿತುಕೊಳ್ಳಲು ಒಪ್ಪುವುದಿಲ್ಲ. ಅಲ್ಲದೆ 3ನೇ ತರಗತಿಗೆ ಕಲಿಕಾ ಸಾಮಗ್ರಿಗಳು ಹೆಚ್ಚಾಗಿರುವುದರಿಂದ ಅಲ್ಲಿ ಗಮನ ಕೊಡುತ್ತಿದ್ದರೆ ಉಳಿದೆರಡು ತರಗತಿಗಳ ಬಗ್ಗೆ ಗಮನ ಹರಿಸಲಾಗುವುದಿಲ್ಲ. ಅಷ್ಟೇ ಅಲ್ಲ ಶಿಕ್ಷಕರಿಗೆ ವಿದ್ಯಾರ್ಥಿವೇತನ, ಬಿಸಿಯೂಟ, ಗಣತಿ, ಚುನಾವಣೆ ಸೇರಿದಂತೆ ಅನ್ಯ ಕೆಲಸಗಳನ್ನು ನೀಡುತ್ತಿರುವುದರಿಂದ ನಲಿಫ್ಕಲಿಯಲ್ಲಿ ಸಂಪೂರ್ಣವಾಗಿ ತೊಡಗಲೂ ಕಷ್ಟವಾಗುತ್ತಿದೆ. ಈ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಆಕ್ಷೇಪಣೆಗಳು ತಲೆ ಎತ್ತಿವೆ.
ಸರಿಯಾದ ನಿರ್ಧಾರವಾಗಲಿ
ನಲಿ-ಕಲಿ ಒಳ್ಳೆಯ ಯೋಜನೆ. ಆದರೆ ಅದನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಲು ಸ್ಪಲ್ಪ ಎಡವುತ್ತಿದ್ದಾರೆ. ಈ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು, ಶಿಕ್ಷಕ ಸಂಘ, ಶಿಕ್ಷಣ ಪ್ರೇಮಿಗಳು, ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರಬೇಕು. ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಇರುವ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಬಾಧಕಗಳೇ ಹೆಚ್ಚಾಗಿ ಬಾಧಿಸಿ ಈ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬ ತೀರ್ಮಾನಕ್ಕೆ ಬರುವುದಾದರೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಆಗ ಇದಕ್ಕಿಂತ ಉತ್ತಮ ವಿಧಾನವನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಸರ್ಕಾರದ ಮೇಲೆ ಬೀಳುತ್ತದೆ. ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನ್ಯಾಯವಾಗಬಾರದು.

ದೇಶದ ನಿಮಾ೯ಣದಲ್ಲಿ ಇ೦ತಹ ಶಿಕ್ಷಕರ ಪಾತ್ರ ತು೦ಬ ಮುಖ್ಯ ಹಾಗೂ ಅ೦ಥವರ ಸ೦ಖ್ಯೆ ಹೆಚ್ಚಾಗಬೇಕಿದೆ. ಶಾಲೆ, ಶಿಕ್ಷಣ, ಕಲಿಕೆಗೆ ತಮ್ಮನ್ನು ಅಪಿ೯ಸಿಕೊ೦ಡ ಇ೦ತಹ ಅನೇಕ ಶಿಕ್ಷಕರನ್ನು ಗೌರವಿಸೋಣ, ಅಭೀನ೦ದಿಸೋಣ. vijayavani 9/10/2015


ರೈತರು, ಕೂಲಿ ಕಾಮಿ೯ಕರು, ಹಿ೦ದುಳಿದವರೇ ಹೆಚ್ಚಾಗಿರುವ ಗ್ರಾಮದಲ್ಲಿ ಶೈಕ್ಷಣಿಕ ಕ೦ಪನ್ನು ಹರಡುವುದರ ಜತೆಗೆ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಎಲ್ಲ ಕೌಶಲಗಳನ್ನು ಕಲಿಸುತ್ತಿದೆ ಶಾಲೆ. 215 ವಿದ್ಯಾಥಿ೯ನಿಯರು ಅಧ್ಯಯನ ಮಾಡುತ್ತಿರುವ ಶಾಲೆಯು ಕೈತೋಟ, ಹೂದೋಟ, ಸ್ವಯ೦ ಉದ್ಯೋಗ ತರಬೇತಿ, ಸ೦ಗೀತ, ಕ೦ಪ್ಯೂಟರ್, ಪರಿಸರ ಕಾಳಜಿ, ಬಿಸಿಯೂಟ ಎಲ್ಲ ಸೌಲಭ್ಯಗಳ ಜತೆಗೆ ಭಾವಿ ಪ್ರಜೆಗಳಿಗೆ ನೈತಿಕತೆಯ ಪಾಠವನ್ನೂ ಬೋ˜ಸುತ್ತಿದೆ.
  ಆದಶ೯ ಶಿಕ್ಷಕ, ಮಾಗ೯ದಶ೯ಕ
   ಶಾಲೆಯ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವ ಎ೦.ಎ. ಘ೦ಟಿಯವರು ಬೆಳಗ್ಗೆ 8.30ಕ್ಕೆ ಶಾಲೆಗೆ ಬ೦ದರೆ ಸ೦ಜೆ 6ರವರೆಗೆ ಶಾಲೆಯಲ್ಲೇ ಇದ್ದು ಸಹಶಿಕ್ಷಕರು ಮತ್ತು ಮಕ್ಕಳಿಗೆ ಮಾಗ೯ದಶ೯ನ ನೀಡುತ್ತಾರೆ. 1982ರಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು ವಿಜಯಪುರ ಹಾಲಗೊ೦ಡಕನಾಳುವಿನಲ್ಲಿ 200ಕ್ಕೂ ಹೆಚ್ಚು ಗಿಡಗಳನ್ನು ಬೆಳಸಿದರು. ಹಾಗಾಗಿ 1987ರಲ್ಲಿ ತಾಲೂಕಿನ ಆದಶ೯ ಪ್ರಶಸ್ತೀ ಪಡೆದರು. 1992ರಿ೦ದ 2006ರವರೆಗ ಬಾಗಲಕೋಟೆ ಬಾದಾಮಿ ಶಾಲೆಯಲ್ಲಿ ಕತ೯ವ್ಯ ನಿವ೯ಹಿಸುತ್ತ ದಾನಿಗಳ ಮನ ಒಲಿಸಿದ್ದರ ಪರಿಣಾಮ 1996ರಲ್ಲಿ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತೀಗೆ ಭಾಜನರಾದರು. 2001ರಲ್ಲಿ ಅತ್ಯುತ್ತಮ ಗಣತಿದಾರರೆ೦ದು ರಾಷ್ಟ್ರಪತಿಗಳ ಬೆಳ್ಳಿಪದಕ ಪುರಸ್ಕೃತರಾದರು. 2006ರಿ೦ದ ಹೂಸೂರು ಶಾಲೆಯ ಮುಖ್ಯಗುರುಗಳಾಗಿ ಶಾಲೆಯನ್ನು ರಾಜ್ಯಕ್ಕೆ ಮಾದರಿ ಎನ್ನುವ೦ತೆ ರೂಪಿಸಿದ ಹೆಗ್ಗಳಿಕೆ ಇವರದು. ಇವರ ಪ್ರಯತ್ನಕ್ಕೆ 2014ರಲ್ಲಿ ಜಿಲ್ಲಾ ಉತ್ತಮ ಪ್ರಶಸ್ತೀಯೂ ಹುಡುಕಿಕೊ೦ಡು ಬ೦ದಿ¨
ಸಕಾ೯ರಿ ಶಾಲೆಗಳೆ೦ದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಸರಿಯಾದ ಸೌಲಭ್ಯಗಳಿರುವುದಿಲ್ಲ, ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ, ಮಕ್ಕಳ ಸವಾ೯೦ಗೀಣ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎನ್ನುವವರು ನಮ್ಮ ನಡುವೆ ಇದ್ದಾರೆ. ಆದರೆ ಈ ಎಲ್ಲ ಮಾತುಗಳಿಗೆ ಅಪವಾದ ಎ೦ಬ೦ತೆ ಅತ್ಯ೦ತ ವಿಶಿಷ್ಟವಾಗಿ ನಡೆಯುವ ಸಕಾ೯ರಿ ಶಾಲೆಗಳೂ ಇವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎ೦ದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೂಸೂರಿನ ಸಕಾ೯ರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ.
     ಬಾದಾಮಿಯಿ೦ದ ಬನಶ೦ಕರಿ ಮೂಲಕ 15 ಕಿ.ಮೀ ಸಾಗಿದರೆ ದೊರೆವ ಪುಟ್ಟ ಗ್ರಾಮ ಹೂಸೂರು. ಒಣ ಬೇಸಾಯ ನ೦ಬಿದ ರೈತರು, ಕೂಲಿ ಕಾಮಿ೯ಕರು, ಹಿ೦ದುಳಿದವರೇ ಹೆಚ್ಚಾಗಿರುವ, ಆಥಿ೯ಕವಾಗಿ ಸಬಲವಲ್ಲದ ಕುಗ್ರಾಮ. ಇ೦ತಹ ಗ್ರಾಮದಲ್ಲಿ ಶೈಕ್ಷಣಿಕ ಕ೦ಪನ್ನು ಹರಡುವುದರ ಜತೆಗೆ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಎಲ್ಲ ಕೌಶಲಗಳನ್ನು ಕಲಿಸುವ ನ೦ದನವನವೇ ಈ ಶಾಲೆ. 215 ವಿದ್ಯಾಥಿ೯ನಿಯರು ಅಧ್ಯಯನ ಮಾಡುತ್ತಿರುವ ಈ ಶಾಲೆಯು ಕೈತೋಟ, ಹೂದೋಟ, ಸ್ವಯ೦ ಉದ್ಯೋಗ ತರಬೇತಿ, ಸ೦ಗೀತ, ಕ೦ಪ್ಯೂಟರ್, ಪರಿಸರ ಕಾಳಜಿ, ಬಿಸಿಯೂಟ ಎಲ್ಲ ಸೌಲಭ್ಯಗಳ ಜೊತೆಗೆ ಭಾವಿ ಪ್ರಜೆಗಳಿಗೆ ನೈತಿಕತೆಯ ಪಾಠವನ್ನೂ ಬೋ˜ಸುತ್ತಿದೆ.
ಸಸ್ಯಲೋಕ: 2006ರಿ೦ದ ಶಾಲೆಯ ಮುಖ್ಯಗುರುಗಳಾಗಿ ಕಾಯ೯ ನಿವ೯ಹಿಸುತ್ತಿರುವ ಎ೦.ಎ. ಘ೦ಟಿಯವರು ಉಳಿದ ಶಿಕ್ಷಕರ, ಗ್ರಾಮಸ್ಥರ ಮತ್ತು ಅ˜ಕಾರಿಗಳ ನೆರವಿನಿ೦ದ ಇದನ್ನೊ೦ದು ಪರಿಪೂಣ೯ ಶಾಲೆಯನ್ನಾಗಿ ಪರಿವತಿ೯ಸಿದ್ದಾರೆ. ಶಾಲೆಯ ಆವರಣ ಪ್ರವೇಶಿಸುತ್ತಿದ೦ತೆ ತೆ೦ಗು, ಬಾದಾಮಿ, ಬ೦ಗಾಳಿ, ಅಶೋಕ ಮು೦ತಾದ ಮರಗಳು, ಅಮೃತಬಳ್ಳಿ, ತುಳಸಿ, ಲೋಳೆಸರ, ಕಾಮಕಸ್ತೂರಿ ಮು೦ತಾದ ಔಷಯ ಸಸ್ಯಗಳು, ದಾಸವಾಳ, ಮಲ್ಲಿಗೆ, ಗುಲಾಬಿಯ೦ತಹ ಹೂವಿನ ಗಿಡಗಳು, ಸೌತೆ, ಮೂಲ೦ಗಿ, ತುಪ್ಪರಿ, ಚೌಳಿ, ನುಗ್ಗೆ, ಬದನೆ, ಟೊಮ್ಯಾಟೊ, ಮೆಣಸಿನಕಾಯಿ ಮತ್ತು ಪಪ್ಪಾಯಿ ಗಿಡಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ. ಹನಿ ನೀರಾವರಿ ಯೋಜನೆ ಅಳವಡಿಸಿರುವುದರಿ೦ದ ಚಿಕ್ಕಮಕ್ಕಳೂ ಈ ತೋಟಕ್ಕೆ ತಮ್ಮ ಕೈ ಜೋಡಿಸುತ್ತಾರೆ. ಬಿಸಿಯೂಟಕ್ಕೆ ಅಗತ್ಯವಾದ ಎಲ್ಲ ತರಕಾರಿಗಳನ್ನು ಇಲ್ಲಿಯೇ ಬೆಳೆಯಲಾಗುತ್ತಿದೆ. ತಿ೦ಗಳಿಗೊಮ್ಮೆ ವಿಶೇಷ ಭೋಜನವೂ ಇರುತ್ತದೆ. ಶಾಲೆಯಲ್ಲಿ ಎರೆಹುಳು ಗೊಬ್ಬರದ ಘಟಕವನ್ನೂ ಸ್ಥಾಪಿಸಲಾಗಿದೆ. ಮಕ್ಕಳಿಗೆ ಇವುಗಳ ಮಹತ್ವ ಮತ್ತು ಬಳಕೆ ಕುರಿತು ಜ್ಞಾನ ನೀಡುತ್ತ ಸ್ವಾವಲ೦ಬಿಗಳಾಗಲು ಅಣಿಗೊಳಿಸಲಾಗುತ್ತಿದೆ. 2013-14ನೇ ಸಾಲಿನ "ಜಿಲ್ಲಾ ಪರಿಸರ ಮಿತ್ರಶಾಲೆ' ಎ೦ಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ.
   ಶಾಲೆಯ ಮುಖ್ಯದ್ವಾರದ ಬಳಿ ಸರಸ್ವತಿ ವಿದ್ಯಾಮ೦ದಿರವನ್ನು ನಿಮಿ೯ಸಲಾಗಿದ್ದು, ಇಲ್ಲಿ ಸ೦ಗೀತಪಾಠಗಳನ್ನು ಹೇಳಿಕೊಡಲಾಗುತ್ತದೆ. ಅದರ ಫಲವಾಗಿ ಈ ಶಾಲಾ ಬಾಲಕಿಯರು ಪ್ರತಿಭಾ ಕಾರ೦ಜಿಯಲ್ಲಿ ಮೂರು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಸ್ಪ˜೯ಸಿದ್ದಾರೆ. ಸಕಾ೯ರ ಮತ್ತು ಇನ್‍ಫೆಸಿಸ್ ಸ೦ಸ್ಥೆಯ ನೆರವಿನಿ೦ದ ದೊರೆತಿರುವ ಎ೦ಟು ಕ೦ಪ್ಯೂಟರ್‍ಗಳಿದ್ದು 4ರಿ೦ದ 7ನೇ ತರಗತಿಯ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಅಗತ್ಯವಿರುವಾಗಲೆಲ್ಲ ಮಕ್ಕಳಿಗೆ ಸ್ಪಧಾ೯ತ್ಮಕ ಪರೀಕ್ಷೆಗೆ ವಿಶೇಷ ತರಬೇತಿಗಳನ್ನು ಶಿಕ್ಷಕರು ನಡೆಸುತ್ತಿದ್ದಾರೆ.

      ಶಿಕ್ಷಣದ ಜೊತೆಗೆ ಸ್ವಯ೦ ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ಪರಿಸರಸ್ನೇಹಿ ಊದುಬತ್ತಿ, ಮೇಣದಬತ್ತಿ, ಸೊಳ್ಳೆ ಬತ್ತಿ ತಯಾರಿಕೆ, ಫಿನಾಯಿಲ್, ಹಲ್ಲುಪುಡಿ, ಸಾಬೂನು ಪುಡಿ ತಯಾರಿಸುವುದರಲ್ಲಿ ಮಕ್ಕಳು ದಕ್ಷರಾಗಿದ್ದಾರೆ. ಅವುಗಳನ್ನು ಶಾಲೆಯ ಬಳಕೆಗೆ ಬಳಸಲಾಗುತ್ತದೆ ಅಥವಾ ಅತಿಥಿಗಳಿಗೆ ಕಾಣಿಕೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಯಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಬೇಕು ಎ೦ಬ ಆಶಯದಲ್ಲಿ ಜಾಥಾಗಳನ್ನು ಪ್ರತಿ ತಿ೦ಗಳಿಗೊಮ್ಮೆ ಆಯೋಜಿಸಲಾಗುತ್ತಿದೆ. ಹಳ್ಳಿ ಜನರಲ್ಲಿ ಬೇರೂರಿರುವ ಮೂಢನ೦ಬಿಕೆ, ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲಕಾಮಿ೯ಕ ಪದ್ಧತಿ ಮು೦ತಾದ ಅನಿಷ್ಠ ಪದ್ಧತಿಗಳ ಕುರಿತು ಮಕ್ಕಳಿ೦ದಲೇ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಶಾಲಾ ರಕ್ಷಣೆ ಮಾಡುವ ಕಾ೦ಪೌ೦ಡನ್ನು ಶಿಕ್ಷಕರು ಜ್ಞಾನಕ್ಕೆ ಪೂರಕವಾಗಿ ಬಳಸಿಕೊ೦ಡಿದ್ದಾರೆ. ಗೋಡೆ ಬರಹವಾಗಿ ಅಕ್ಷರವೃಕ್ಷ, ವಿವಿಧ ಸಾಧಕರು, ಪ್ರಧಾನಮ೦ತ್ರಿಗಳು, ರಾಷ್ಟ್ರಪತಿಗಳು, ವಿಶ್ವಸ೦ಸ್ಥೆಯ ಅ೦ಗಸ೦ಸ್ಥೆಗಳು, ರಾಜ್ಯ-ರಾಜಧಾನಿಗಳು, ವ್ಯಾಕರಣ, ಗಣಿತಸೂತ್ರಗಳು, ವಿಜ್ಞಾನದ ಪ್ರಯೋಗಗಳ ಚಿತ್ರಗಳು ಮಕ್ಕಳಲ್ಲಿ ಸಾಮಾನ್ಯಜ್ಞಾನವನ್ನು ಬೆಳೆಸುತ್ತಿವೆ. ಶಾಲೆಯ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರ೦ಥಾಲಯಗಳು ಮಕ್ಕಳ ಕುತೂಹಲವನ್ನು ತಣಿಸುವುದರಲ್ಲಿ ಹಿ೦ದೆಬಿದ್ದಿಲ್ಲ.  ಬಹಳಷ್ಟು ವೈಶಿಷ್ಟಗಳಿ೦ದ ಎಲ್ಲರ ಗಮನ ಸೆಳೆಯುತ್ತಿರುವ ಈ ಶಾಲೆ ಮೊದಲು ಇ೦ದಿನ೦ತಿರಲಿಲ್ಲ. 1949ರಲ್ಲಿ ಪ್ರಾರ೦ಭವಾದ ಈ ಶಾಲೆ ಕೇವಲ ಎರಡು ಕೊಠಡಿಗಳ ಆಶ್ರಯದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು. ಕಾಲಕ್ರಮೇಣ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಶಾಲೆಯ ಸುತ್ತಲೂ ತಿಪೆ³ಗು೦ಡಿಗಳು ತು೦ಬಿಕೊ೦ಡಿದ್ದವು. 2006ರಲ್ಲಿ ಈ ಶಾಲೆಗೆ ಮುಖ್ಯಗುರುಗಳಾಗಿ ಎ೦.ಎ. ಘ೦ಟಿಯವರು ಬ೦ದ ನ೦ತರ ಶಾಲಾಚಿತ್ರಣವೇ ಬದಲಾಯಿತು. ಗ್ರಾಮಸ್ಥರ, ಜನಪ್ರತಿನಿ˜ಗಳ, ಎಸ್.ಡಿ.ಎ೦.ಸಿ.ಯವರ ಸಹಕಾರ ಮತ್ತು ಅ˜ಕಾರಿಗಳ ಮಾಗ೯ದಶ೯ನ, ಕಲಿಕೆಯಲ್ಲಿ ಮಕ್ಕಳ ಉತ್ಸಾಹ, ಮುಖ್ಯವಾಗಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿ೦ದ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ. "ಗುಣಾತ್ಮಕ ಶಿಕ್ಷಣದೊ೦ದಿಗೆ ಶಾಲಾಕಲಿಕಾ ಜ್ಞಾನವನ್ನು ದೈನ೦ದಿನ ಜೀವನಕ್ಕೆ ಅಳವಡಿಸಿ, ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ' ಎನ್ನುವ ಬಾದಾಮಿಯ ಕ್ಷೇತ್ರಶಿಕ್ಷಣಾ˜ಕಾರಿ ಎ.ಎ೦. ವಡಿಗೇರಿಯವರ ಮಾತುಗಳು ಅಕ್ಷರಶಃ ಸತ್ಯ.
    ಇ೦ತಹ ಶಿಕ್ಷಕರು ಮತ್ತು ಶಾಲೆಗಳು ತಮ್ಮದೇ ಆದ ಆದಶ೯ಗಳಿ೦ದ ಶೈಕ್ಷಣಿಕ ರ೦ಗಕ್ಕೆ ಮಾದರಿ ಎ೦ದರೆ ತಪ್ಪಲ್ಲ. ದೇಶದ ನಿಮಾ೯ಣದಲ್ಲಿ ಇ೦ತಹ ಶಿಕ್ಷಕರ ಪಾತ್ರ ತು೦ಬ ಮುಖ್ಯ ಹಾಗೂ ಅ೦ಥವರ ಸ೦ಖ್ಯೆ ಹೆಚ್ಚಾಗಬೇಕಿದೆ. ಶಾಲೆ, ಶಿಕ್ಷಣ, ಕಲಿಕೆಗೆ ತಮ್ಮನ್ನು ಅಪಿ೯ಸಿಕೊ೦ಡ ಇ೦ತಹ ಅನೇಕ ಶಿಕ್ಷಕರನ್ನು ಗೌರವಿಸೋಣ, ಅಭೀನ೦ದಿಸೋಣ. ಎ೦.ಎ. ಘ೦ಟಿಯವರ ಸ೦ಪಕ೯ ಸ೦ಖ್ಯೆ: 9880341877
                         (ಲೇಖಕರು ಹಗರಿಬೊಮ್ಮನಹಳ್ಳಿಯಲ್ಲಿ ಕ್ಷೇತ್ರ ಸ೦ಪನ್ಮೂಲ ವ್ಯಕ್ತಿ)

ಟೆಸ್ ಇಂಡಿಯಾದ ಓಇಆರ್ ಕುರಿತ ಪರಿಚಯಾತ್ಮಕ ಲೇಖನ 15/7/2015 ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಓದಿ ಪ್ರತಿಕ್ರಿಯಿಸಲು ವಿನಂತಿ