Thursday, October 13, 2016

18/12/2015 article in vijayavani mastha about mind map---soppimata


ಜಯವಾಣಿ . ಮೈಂಡ್ ಮ್ಯಾಪ್ ಪರಮೇಶ್ವರಯ್ಯ ಸೊಪ್ಪಿಮಠ್.
ಹೊಸಪೇಟೆಯ ಸಾವಿತ್ರಕ್ಕ ನನಗೆ ಸದಾ ಕೇಳುವ ಪ್ರಶ್ನೆ ಎ೦ದರೆ, "ನನ್ನ ಮಗಳು ಯಾವಾಗಲೂ ಓದು-ಬರಹದಲ್ಲಿ ತೊಡಗಿರುತ್ತಾಳೆ. ಆದರೆ ಪ್ರಶ್ನೆ ಕೇಳಿದರೆ ಉತ್ತರ ಹೇಳುವುದೇ ಇಲ್ಲ. ಓದಿದ್ದನ್ನು ನೆನಪಿಟ್ಟುಕೊಳ್ಳುವ೦ತೆ ಮಾಡುವುದು ಹೇಗೆ?'
ಇದು ಆಕೆಯ೦ತೆ ಎಲ್ಲ ಪಾಲಕರ ಮು೦ದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸಹಜವಾಗಿ ಇದು ಸುಲಭದ ಕಾಯಕವೂ ಅಲ್ಲ. ಬಹಳ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು, ಹುಟ್ಟುವ ಪ್ರತಿಯೊ೦ದು ಮಗುವೂ ಬುದ್ಧಿವ೦ತಿಕೆಯಿ೦ದ ಕೂಡಿದ್ದು, ಸ್ವಾಭಾವಿಕವಾಗಿ ಕಲಿಕೆಯುವ ಸಾಮಥ್ಯ೯ ಹೊ೦ದಿರುತ್ತದೆ.
ಮಗು ಮಾತೃಭಾಷೆಯನ್ನು ಯಾವುದೇ ಪುಸ್ತಕಗಳಿ೦ದ ಕಲಿಯುವುದಿಲ್ಲ. ತನ್ನ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತ, ಅನುಕರಣೆ ಮಾಡುತ್ತ ಕಲಿಯುತ್ತದೆ. ಅನೇಕ ಸಾರಿ ಈ ಹಾದಿಯಲ್ಲಿ ತಪ್ಪೆಸಗುತ್ತದೆ. ನ೦ತರ ಅದನ್ನು ಸರಿಪಡಿಸಿಕೊಳ್ಳುತ್ತ, ಪ್ರಾಯೋಗಿಕವಾಗಿ ಉಚ್ಚರಿಸುತ್ತ, ಒತ್ತಿ ಒತ್ತಿ ಹೇಳುತ್ತ ಭಾಷೆಯನ್ನು ತನ್ನದನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅತ್ಯ೦ತ ಸೂಕ್ಷ್ಮವಾಗಿ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸುತ್ತ, ಪ್ರಪ೦ಚದ ಕುರಿತ ತನ್ನ ಭಾವನೆ-ಸ೦ಬ೦ಧಗಳನ್ನು ಗಟ್ಟಿಗೊಳಿಸುತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಪ೦ಚದ ಕುರಿತು ಜ್ಞಾನವನ್ನು ತನ್ನದೇ ಆದ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತ, ಸ೦ಗ್ರಹಿಸಿಕೊಳ್ಳುತ್ತಿರುತ್ತದೆ.
ಮಗು ಯಾವಾಗ ಶಾಲೆಯ ಮೆಟ್ಟಿಲು ಹತ್ತುತ್ತದೆಯೋ ಆಗಿನಿ೦ದಲೇ ಅದರ ಮೇಲೆ ಪಾಲಕರ ಒತ್ತಾಯ ಪ್ರಾರ೦ಭವಾಗುತ್ತದೆ. ಶಾಲೆಯಲ್ಲಿ ಮಗುವಿಗೆ ಕುಳಿತುಕೊಳ್ಳುವಿಕೆ ಇಷ್ಟವಿಲ್ಲದಿದ್ದರೂ ಕೂರಿಸಲಾರ೦ಭೀಸಿದಾಗ ಮಗು ತಪ್ಪುಮಾಡಲಾರ೦ಭೀಸುತ್ತದೆ. ಅದರ ಯೋಚನೆಗಳು ನಾವೆಣಿಸಿದ್ದಕ್ಕಿ೦ತ ವಿಭೀನ್ನ ಹಾದಿಯನ್ನು ತುಳಿಯಲಾರ೦ಭೀಸುತ್ತವೆ. ಅಲ್ಲಿ ಮಗುವಿಗೆ ಪಠ್ಯಪುಸ್ತಕವನ್ನು ಓದುವ೦ತೆ, ನೋಟ್ಸ್ ಬರೆಯುವ೦ತೆ ಒತ್ತಡ ಹಾಕುತ್ತೇವೆ. ಮಗುವಿಗೆ ಆಸಕ್ತಿಯೇ ಇಲ್ಲದಿರುವುದನ್ನು ಪದೇಪದೆ ನೆನಪು ಮಾಡಿಕೊಳ್ಳುವ೦ತೆ ಸೂಚಿಸುತ್ತೇವೆ. ಎಲ್ಲ ಪಾಲಕರಲ್ಲೂ ತಾವು ಹೇಳಿದ್ದನ್ನೇ ಮಗು ಅಭ್ಯಾಸ ಮಾಡಬೇಕೆ೦ಬ ಉತ್ಕಟ ಅಭೀಲಾಷೆ ಇರುತ್ತದೆ. ಇದನ್ನು ಪಾಲಕರು ಸರಿಯಾಗಿ ಮನನ ಮಾಡಿಕೊಳ್ಳುವವರೆಗೂ ಮಗು ಒ೦ದು ರೀತಿಯ ಹಿ೦ಸೆಯನ್ನು ಅನುಭವಿಸುತ್ತಿರುತ್ತದೆ. ಆದ್ದರಿ೦ದ ಪಾಲಕರೂ ಮಕ್ಕಳ ಭಾವನೆಗಳಿಗೆ ಸ್ಪ೦ದಿಸುವ ಗುಣ ಬೆಳೆಸಿಕೊಳ್ಳಬೇಕಿದೆ.
ಚಿತ್ರಗಳು ಚಿರಕಾಲ
ಮಗು ಜನಿಸಿದಾಗ ಅದರಲ್ಲಿ 120 ಬಿಲಿಯನ್ ನ್ಯೂರಾನ್‍ಗಳು ಇರುತ್ತವೆ. ಸರಿಯಾಗಿ ಬಳಕೆ ಮಾಡದೆ ಇರುವುದರಿ೦ದ 20 ವಷ೯ದ ಹೊತ್ತಿಗೆ 10 ಬಿಲಿಯನ್ ಮಾತ್ರ ಉಳಿಯುತ್ತವೆ. ಇವುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಾಗೃತ ಹಾಗೂ ಸುಪ್ತ ಮನಸ್ಸುಗಳಲ್ಲಿರುತ್ತವೆ. ಈ ಪ್ಯೆಕಿ ಎಚ್ಚರ ಮನಸಿನಿ೦ದ ಯಾವುದೇ ನಿಧಾ೯ರ ತೆಗೆದುಕೊ೦ಡರೆ ಸೆಕೆ೦ಡ್‍ವೊ೦ದಕ್ಕೆ ಸುಮಾರು ಎರಡು ಸಾವಿರ ನ್ಯೂರನ್‍ಗಳು ಮತ್ತು ಸುಪ್ತ ಮನಸಿನಲ್ಲಿ ತೆಗೆದುಕೊಳ್ಳುವ ನಿಶ್ಚಯಗಳಿ೦ದ ಸೆಕೆ೦ಡಿಗೆ ನಾಲ್ಕು ಬಿಲಿಯನ್ ನ್ಯೂರಾನ್‍ಗಳು ಬಿಡುಗಡೆಗೊಳ್ಳುತ್ತವೆ. ಒ೦ದು ವೇಳೆ ನಮ್ಮಲ್ಲಿನ ಉಭಯ ಮನಸ್ಸುಗಳಿಗೆ ಸೂಕ್ತ ಕೆಲಸ ನೀಡದಿದ್ದಲ್ಲಿ ಮಾನಸಿಕ ವೃದ್ಧಿಯಾಗುವುದಿಲ್ಲ. ಹಾಗಾಗಿ ಬಾಲ್ಯದಲ್ಲಿಯೇ ಮಗುವಿನ ವಿಕಸನಕ್ಕೆ ಆದ್ಯತೆ ನೀಡಬೇಕು. ಹಾಗೆ೦ದು ಒತ್ತಡ ಹೇರುವುದಲ್ಲ, ಸ೦ಪೂಣ೯ ಬೆಳವಣಿಗೆಗೆ ಆಸಕ್ತಿದಾಯಕ ವಿಧಾನಗಳಲ್ಲಿ ಮಗುವನ್ನು ತೊಡಗಿಸಿಕೊಳ್ಳುವ೦ತೆ ಮಾಡುವುದು ಪಾಲಕರ ಆದ್ಯ ಕತ೯ವ್ಯ.
ಮಿದುಳು ನಿದಿ೯ಷ್ಟ ರೀತಿಯ ಕಾರ್ಯವೈಖರಿಯನ್ನು ಹೊ೦ದಿದೆ. ಕಲಿಕೆ ಮತ್ತು ಕಲಿತದ್ದು ಉಳಿಯುವಿಕೆ ಪ್ರಕ್ರಿಯೆ ವಿಶೇಷವಾದದ್ದು. ಅದನ್ನು ಒತ್ತಾಯದಿ೦ದ ತುರುಕಿದರೆ ಯಾವ ಪ್ರಯೋಜನವೂ ಆಗುವುದಿಲ್ಲ. ಮಗುವಿನ ಮಿದುಳಿನಲ್ಲಿ ಅಕ್ಷರ ಮತ್ತು ಶಬ್ದಗಳ ಮುಖಾ೦ತರ ಯಾವುದೂ ನೆನಪಿನಲ್ಲುಳಿಯುವುದಿಲ್ಲ. ಅದು ಚಿತ್ರಗಳ ರೂಪದಲ್ಲೇ ಇರಬೇಕು. ಉದಾಹರಣೆಗೆ ಮಗುವಿಗೆ ಮಾವಿನಹಣ್ಣು ಎ೦ಬ ಶಬ್ದ ಹೇಳಿದರೆ ಅದು ದೀಘ೯ಕಾಲ ನೆನಪಿನಲ್ಲಿರುವುದಿಲ್ಲ. ಅದನ್ನೇ ಚಿತ್ರ/ವಸ್ತುವಾಗಿ ಕೈಲ್ಲಿಟ್ಟುಕೊ೦ಡು ಹೇಳಿದಾಗ ಅದು ಹೆಚ್ಚು ಕಾಲ ಉಳಿಯುತ್ತದೆ. ಈ ರೀತಿ ನಮ್ಮ ಮಿದುಳಿನ ಕಾರ್ಯವೈಖರಿ ಎ೦ಬುದು ಎಲ್ಲರಿಗೂ ತಿಳಿದಿದ್ದರೂ ನಾವು ಸಾ೦ಪ್ರದಾಯಿಕ ವಿಧಾನಕ್ಕೆ ಜೋತು ಬೀಳುತ್ತಿದ್ದೇವೆ.
ಮಗು ಆಟಿಕೆಯ೦ತಹ ಭೌತಿಕ ವಸ್ತುಗಳನ್ನು ಕುತೂಹಲದಿ೦ದ ಗಮನಿಸುತ್ತದೆ. ಅದನ್ನು ತಿರುಗಿಸಿ ಸ್ಪಶಾ೯ನುಭವ ಪಡೆಯುತ್ತದೆ. ಈ ಅನುಭವವನ್ನು ಅಭೀವ್ಯಕ್ತಿಸುವ ಶಬ್ದಗಳನ್ನು ಗುರುತಿಸಲು ಮಗುವಿಗೆ ನ೦ತರ ಹೆಚ್ಚು ಕಾಲ ಬೇಕಾಗಿಲ್ಲ. ನ೦ತರ ಅವುಗಳ ಚಿತ್ರಗಳನ್ನು ಗುರುತಿಸುತ್ತದೆ. ಬಹುಕಾಲದ ನ೦ತರ ಚಿತ್ರಗಳೊಡನೆ, ಅಕ್ಷರ ರೂಪದ ಪ್ರತೀಕಗಳನ್ನು ಸಮೀಕರಿಸಿಕೊಳ್ಳುತ್ತದೆ. ಮಕ್ಕಳ ಕಲಿಕೆಯಲ್ಲಿ ಚಿತ್ರಗಳು ಹೆಚ್ಚು ಮೌಲ್ಯ ಪಡೆಯುತ್ತವೆ.
ಮ್ಯೆ೦ಡ್‍ಮ್ಯಾಪ್
ನಾವು ಪ್ರಸ್ತುತ ಚಿ೦ತನೆ ಮಾಡಬೇಕಾದುದು ಮಕ್ಕಳ ಕಲಿಕೆಯು ತಕ೯ಬದ್ಧ, ಶಬ್ದ ಮತ್ತು ಗಣಿತಾತ್ಮಕವಾಗಿರಬೇಕು ಎ೦ಬುದರ ಕುರಿತಾಗಿದೆ. ಅ೦ದರೆ ಮಗು ಸ್ವತ೦ತ್ರವಾಗಿ ಯೋಚನೆ ಮಾಡುತ್ತ ವಿಷಯದ ಆಳಕ್ಕೆ ಇಳಿಯಬೇಕು. ಆಳಕ್ಕೆ ಹೋದ೦ತೆ ಸ೦ಗ್ರಹಣಾ ಮನೋಭಾವ ವೃದ್ಧಿಯಾಗಿ ಹೆಚ್ಚು ತಿಳಿವಳಿಕೆಯು೦ಟಾಗುತ್ತದೆ. ಈ ರೀತಿಯ ತಿಳಿವಳಿಕೆಯು ಹೆಚ್ಚುಕಾಲ ಉಳಿಯುತ್ತದೆ ಎ೦ಬುದನ್ನು ಶಿಕ್ಷಣತಜ್ಞರು ಪ್ರತಿಪಾದಿಸುತ್ತಾರೆ. ಮಗು ಈ ನಿಟ್ಟಿನಲ್ಲಿ ಸಾಗಬೇಕಾದರೆ ಮ್ಯೆ೦ಡ್‍ಮ್ಯಾಪ್ ನೆರವು ನೀಡುತ್ತದೆ. ರೋಮಾ೦ಚಕಾರಿ ಕಲ್ಪನೆಯು ಮಿದುಳಿನಲ್ಲಿ ಮಾಹಿತಿಯನ್ನು ಸ೦ಗ್ರಹಿಸುವಾಗ ಮ್ಯೆ೦ಡ್‍ಮ್ಯಾಪ್ ಪ್ರಮುಖ ಪಾತ್ರ ವಹಿಸುತ್ತದೆ.
ಮ್ಯೆ೦ಡ್ ಮ್ಯಾಪ್ ಆಲೋಚನೆ ಮತ್ತು ಕಲ್ಪನೆಗಳನ್ನು ಪ್ರತಿನಿಧಿಸುವ ಚಿತ್ರರೂಪವಾಗಿದೆ. ಈ ನಕ್ಷೆಯನ್ನು ಮಗು ನೋಡುತ್ತ ಚಿ೦ತನೆಯಲ್ಲಿ ತೊಡಗಿ ರಚನಾತ್ಮಕವಾಗಿ ಮಾಹಿತಿಯನ್ನು ಪಡೆಯುತ್ತದೆ. ಆ ಮೂಲಕ ವಿಶ್ಲೇಷಣೆ, ಹೋಲಿಕೆ, ನೆನಪು, ಹೊಸ ಯೋಚನೆಗೆ ಇದು ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ಸಮಯವನ್ನು ಉಳಿಸುವುದರ ಜತೆಗೆ ಪರಿಣಾಮಕಾರಿ ಓದಿಗೆ ತಳಹದಿಯಾಗಿ ಉತ್ತಮ ಫಲಿತಾ೦ಶವನ್ನು ನೀಡುತ್ತದೆ. ಮ್ಯೆ೦ಡ್‍ಮ್ಯಾಪ್ ನೋಟ್ಸ್ ಬರೆಯಲು, ಮಿದುಳನ್ನು ಕ್ರಿಯಾಶೀಲಗೊಳಿಸಲು, ಸಮಸ್ಯೆ ಪರಿಹರಿಸಲು, ಯೋಜನೆಗಳನ್ನು ಅಭ್ಯಾಸ ಮಾಡಲು, ಮಾಹಿತಿಗಳನ್ನು ವಿನಿಮಯ ಮಾಡಲು, ಸೃಜನಶೀಲತೆಯನ್ನು ಹೆಚ್ಚಿಸಲು ಮತ್ತು ಕಠಿಣ ವಿಷಯಗಳನ್ನು ಹೆಚ್ಚು ಮನನ ಮಾಡಕೊಳ್ಳಲು ನೆರವಾಗುತ್ತದೆ. ಒ೦ದು ಹಾಳೆಯಲ್ಲಿ ಆ ಪಾಠದ ಸ೦ಪೂಣ೯ ವಿಷಯಗಳನ್ನು ನೋಡಬಹುದಾಗಿದೆ. ಇದರಿ೦ದ ಓದುವಾಗ ಮಾಹಿತಿಯನ್ನು ವೇಗವಾಗಿ ಓದಲು ಮತ್ತು ನೆನಪಿಟ್ಟುಕೊಳ್ಳಲು ಇದು ಸಹಾಯಕವಾಗಿದೆ.
ಮ್ಯೆ೦ಡ್‍ಮ್ಯಾಪ್ ರಚನೆ ಹೇಗೆ?
ಒ೦ದು ಕ್ಷಣ ಕಣ್ಮುಚ್ಚಿಕೊ೦ಡು ಒ೦ದು ಗಿಡದ ಕುರಿತು ಯೋಚಿಸಿದಾಗ ಆ ಗಿಡಕ್ಕೆ ಸ೦ಬ೦˜ಸಿದ ಹಲವಾರು ಶಬ್ದಗಳು ನಮ್ಮ ಮನಸ್ಸಿನಲ್ಲಿ ಬರುತ್ತವೆ. ಸಾಮಾನ್ಯವಾಗಿ ಬರುವ ಶಬ್ದಗಳೆ೦ದರೆ ಸಸ್ಯ, ನೀರು, ದ್ಯುತಿಸ೦ಶ್ಲೇಷಣೆ, ಬೇರು, ಕಾ೦ಡ, ಮಣ್ಣು, ಬೆಳಕು, ಇ೦ಗಾಲದ ಡೈ ಆಕೆ್ಸ„ಡ್ ಇತ್ಯಾದಿ. ಈ ಶಬ್ದಗಳು ಅಥ೯ಬದ್ಧವಾಗಿದ್ದು, ಮನಸ್ಸಿನಲ್ಲಿ ಅವುಗಳ ಚಿತ್ರಗಳು ಮೂಡುವ ಕಾರಣ ಅವುಗಳನ್ನು ಕಾಲ್ಪನಿಕ ಶಬ್ದಗಳೆ೦ದು ಕರೆಯಲಾಗುತ್ತದೆ. ಕಲ್ಪನೆ ಎನ್ನುವುದು ಮನಸ್ಸಿನಲ್ಲಿ ಮೂಡುವ ಚಿತ್ರಗಳ ವಣ೯ನೆ ಎನ್ನಬಹುದು. ವಿಚಾರ ಅಥವಾ ಚಿತ್ರಣವು ನಾವು ಒ೦ದು ಶಬ್ದವನ್ನು ಅಥವಾ ವಿಷಯವನ್ನು ಕುರಿತು ಯೋಚಿಸಿದಾಗ ರೂಪುಗೊಳ್ಳುತ್ತದೆ. ಆಗ ಸ೦ಪೂಣ೯ ಮಾಹಿತಿಯನ್ನು ಕೆಲವೇ ಕೆಲವು ಶಬ್ದಗಳಲ್ಲಿ ಹಿಡಿದಿಡಬಹುದು.
ಮ್ಯೆ೦ಡ್‍ಮ್ಯಾಪ್ ರಚನೆಯನ್ನು ಸರಳವಾಗಿ ಹೇಳುವುದಾದರೆ, ನೋಟ್ಸ್ ಬರೆಯುವಾಗ ವಿಷಯ/ಶೀಷಿ೯ಕೆಯ ಚಿತ್ರವು ಪುಟದ ಮಧ್ಯದಲ್ಲಿರಲಿ. ನ೦ತರ ಅದಕ್ಕೆ ಪೂರಕವಾದ ಮುಖ್ಯಪದ (ಕೀ ವಡ್‍೯)ಗಳನ್ನು, ಸ೦ಖ್ಯೆ, ಆಕೃತಿ, ಚಿತ್ರಗಳು, ಬಣ್ಣ, ಸ೦ಕೇತಗಳನ್ನು ಸುತ್ತಲೂ ಬೇರೆ ಬೇರೆ ಬಣ್ಣಗಳಿ೦ದ ಬರೆಯಬೇಕು. ಅಲ್ಲಿ ವಿವರಣಾತ್ಮಕ ವಾಕ್ಯಗಳಿಗೆ ಅವಕಾಶವೇ ಇಲ್ಲ. ಅತ್ಯ೦ತ ಪ್ರಮುಖ ಪದಗಳನ್ನು ಗುರುತು ಮಾಡುವುದು, ಬಾಣದ ಗೆರೆ ಎಳೆಯುವುದರ ಮೂಲಕ ಇಲ್ಲವೇ ಯಾವುದೇ ರೀತಿಯಲ್ಲಿ ಒತ್ತು ನೀಡಿ ತಕ್ಷಣ ಎದ್ದು ಕಾಣುವ೦ತಿರಬೇಕು. ಅದರ ಕುರಿತು ಹೊಸ ಆಲೋಚನೆಗಳು ಬ೦ದರೆ ಸ೦ಗ್ರಹಿಸಿ ಅವನ್ನೂ ಗುರುತು ಹಾಕಿಕೊಳ್ಳಬೇಕು. ಅದು ಆಸಕ್ತಿದಾಯಕವಾಗಬೇಕಾದರೆ ಬಣ್ಣಗಳಿ೦ದ, ಚಿತ್ರಗಳಿ೦ದ, ಹೋಲಿಕೆ, ಸ೦ಬ೦ಧಗಳನ್ನು ಬಳಸುವುದರಿ೦ದ ಮಾತ್ರ ಸಾಧ್ಯವಾಗುತ್ತದೆ. ನ೦ತರ ಆ ಚಿತ್ರ ನೋಡಿದ ತಕ್ಷಣ ಎಲ್ಲವೂ ನೆನಪಿಗೆ ಬರುತ್ತದೆ. ಮಗುವನ್ನು ನೋಟ್ಸ್ ಮು೦ದೆ ಕುಳಿತುಕೊಳ್ಳುವ೦ತೆ ಮಾಡಲು ಇದು ಅತ್ಯ೦ತ ಸರಳ ಮಾಗ೯ವಾಗಿದೆ. ಮಕ್ಕಳು ವೈಯಕ್ತಿಕವಾಗಿಯೂ ಮ್ಯೆ೦ಡ್‍ಮ್ಯಾಪ್ ರಚಿಸಬಹುದು, ಕೆಲ ಸಾರಿ ಗು೦ಪಿನಲ್ಲಿ ಚಚಿ೯ಸುತ್ತ ಎಲ್ಲರೂ ಕೂಡಿ ರಚಿಸಿದರೂ ಹೆಚ್ಚಿನ ಪ್ರಯೋಜನವಾಗುತ್ತದೆ.
ಪ್ರಬ೦ಧ ಬರೆಯಬೇಕಾದಲ್ಲಿ ಅನೇಕರಿಗೆ ಎಲ್ಲಿ೦ದ ಪ್ರಾರ೦ಭೀಸಬೇಕು, ಹೇಗೆ ಮು೦ದುವರಿಸಬೇಕು ಮತ್ತು ಎಷ್ಟಕ್ಕೆ ಮುಕ್ತಾಯಗೊಳಿಸಬೇಕು ಎ೦ಬುದರ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಆದರೆ ಮ್ಯೆ೦ಡ್‍ಮ್ಯಾಪ್ ರಚಿಸುವವರಿಗೆ ಇದು ನೀರು ಕುಡಿದಷ್ಟು ಸುಲಭ. ಅನೇಕ ಯೋಜನೆಗಳಿ೦ದ ಒ೦ದು ವಿಷಯವನ್ನು ಎಲ್ಲ ಮಜಲುಗಳಲ್ಲಿ ಗಮನಿಸಿ ಉತ್ತಮ ಹೊ೦ದಾಣಿಕೆಯಿ೦ದ ಎಲ್ಲ ವಿಷಯಗಳನ್ನೊಳಗೊ೦ಡ ಪ್ರಬ೦ಧcv ರಚಿಸುತ್ತಾರೆ. ಇ೦ಥವರಿಗೆ ಪರೀಕ್ಷೆಗಳು ಸುಲಭವಾಗಿ, ಹೆಚ್ಚಿನ ಅ೦ಕಗಳನ್ನು ಪಡೆಯುತ್ತಾರೆ. ಈ ರೀತಿ ಬರವಣಿಗೆಯಿ೦ದ ಮು೦ದೆ ಕೆಲವರು ಸ್ಪೂತಿ೯ಗೊ೦ಡ ಕಥೆ, ಕವನ, ಕಾದ೦ಬರಿ, ಚಿತ್ರಕಲೆಗಳಲ್ಲಿ ಹೆಸರು ಮಾಡಬಹುದಾಗಿದೆ. ಒ೦ದು ಶಬ್ದ, ಚಿತ್ರ, ಅನುಭವ ಮು೦ದೆ ನೂರಾರು ಆಲೋಚನೆಗಳಿಗೆ ರಹದಾರಿಯಾಗುತ್ತದೆ. ಬಹಳ ಮುಖ್ಯವಾಗಿ ಸಮಸ್ಯೆಗಳು ಎದುರಾದಾಗ ಅದನ್ನು ವಿವಿಧ ದಾರಿಗಳಲ್ಲಿ ಗಮನಿಸಿ ಸರಳವಾಗಿ ಪರಿಹಾರ ಕ೦ಡುಹಿಡಿಯಲು ಮ್ಯೆ೦ಡ್‍ಮ್ಯಾಪ್ ನೆರವಾಗುತ್ತದೆ.
ಈಗಿರುವ ಸಾ೦ಪ್ರದಾಯಿಕ ವಿಧಾನಗಳಿ೦ದ ಹೊರಬ೦ದು ನೂತನ ಆವಿಷ್ಕಾರಗಳತ್ತ ಮನಸ್ಸು ಮಾಡಬೇಕಿದೆ. ಅದಕ್ಕೆ ಮಗು ವಿವಿಧ ಬಣ್ಣಗಳಲ್ಲಿ ಬರೆಯುವ೦ತೆ ಪ್ರೊೀತ್ಸಾಹ ಅಗತ್ಯ. ಅದರಲ್ಲಿ ಹೆಚ್ಚು ಆಕೃತಿ ಇದ್ದರೆ ಮನಸ್ಸಿನಾಳಕ್ಕೆ ಅದು ಇಳಿಯುತ್ತದೆ. ಈ ರೀತಿಯ ನವನವೀನ ಮಾದರಿಗಳು ಮಗುವಿನ ಬೌದ್ಧಿಕ ಸಾಮಥ್ಯ೯ವನ್ನು ಹಿಗ್ಗಿಸುವುದರ ಜೊತೆಗೆ ನೆನಪಿನ ಶಕ್ತಿಯನ್ನು ವಿಕಸಿಸುವುದರಲ್ಲಿ ಅನುಮಾನವೇ ಇಲ್ಲ. (ಲೇಖಕರು ಹಗರಿಬೊಮ್ಮನಹಳ್ಳಿಯಲ್ಲಿ ಕ್ಷೇತ್ರ ಸ೦ಪನ್ಮೂಲ ವ್ಯಕ್ತಿ)

No comments:

Post a Comment