Thursday, October 13, 2016

8/1/2016ರ ವಿಜಯವಾಣಿ ಮಸ್ತ ಪುರವಣಿಯಲ್ಲಿ ನಲಿಕಲಿ ಕುರಿತ ನನ್ನ ಲೇಖನ


ಲಿ-ಕಲಿ ಒಂದು ಅವಲೋಕನ
ಪರಮೇಶ್ವರಯ್ಯ ಸೊಪ್ಪಿಮಠ
ಶಿಕ್ಷಣ ಕ್ಷೇತ್ರದಲ್ಲಿ ಸಣ್ಣ ವ್ಯತ್ಯಾಸ/ಬದಲಾವಣೆಯಾದರೂ ದೊಡ್ಡಮಟ್ಟದ ಚರ್ಚೆಯಾಗುತ್ತದೆ. ಇದು ಉತ್ತಮ ಬೆಳವಣಿಗೆಯೂ ಹೌದು. ಪ್ರಸ್ತುತ 1ರಿಂದ 3ನೇ ತರಗತಿವರೆಗಿನ ಬೋಧನಾ ವಿಧಾನವಾದ ಲಿ-ಕಲಿ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳು ಕೇಳಿಬರುತ್ತಿದೆ. ಹೀಗಾಗಿ ಈ ಪದ್ಧತಿಯ ಸಾಧಕ, ಬಾಧಕಗಳ ಸಂಪೂರ್ಣ ಅವಲೋಕನ ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ ಕಿರಿಯ ಪ್ರಾಥಮಿಕ ಹಂತದಲ್ಲಿ ಎರಡು ರೀತಿಯ ಶಿಕ್ಷಣ ಪದ್ಧತಿ ಇದೆ, ಕಲಿ- ಲಿ ಹಾಗೂ ನಲಿಫ್ಕಲಿ. ಖಾಸಗಿ ಶಾಲೆಗಳಲ್ಲಿ ಕಲಿ- ಲಿ ಪದ್ಧತಿಯಾದರೆ, ಸರ್ಕಾರಿ ಶಾಲೆಗಳಲ್ಲಿ ಕಲಿ- ಲಿ ವಿಧಾನದ ಬೋಧನೆ. ಎರಡು ಶಾಲೆಗಳೂ ರಾಜ್ಯ ಸರ್ಕಾರದ ಅಡಿಯಲ್ಲೇ ಬರುತ್ತವೆ.
ಆದರೂ ದ್ವಿಮುಖ ನೀತಿ ಏಕೆ? ಇದು ತಾರತಮ್ಯವಲ್ಲವೇ? ಎಲ್ಲ ಶಾಲೆಗಳಲ್ಲೂ ಒಂದೇ ರೀತಿಯ ವಿಧಾನ ಅಳವಡಿಸಲಿ ಎಂಬುದು ಬಹುತೇಕರ ವಾದ. ಆದರಿದು ಕಾರ್ಯರೂಪಕ್ಕೆ ಬಂದಿಲ್ಲ.ವ್ಯತ್ಯಾಸ ಏನು?ಕಲಿಫ್ನಲಿ ವಿಧಾನದಲ್ಲಿ ಪಠ್ಯಪುಸ್ತಕಗಳು ಮುಖ್ಯ ಪಾತ್ರವಹಿಸುತ್ತವೆ. ಶಿಕ್ಷಕರು ಬೋಧನೆಮಾಡುತ್ತಾರೆ. ಈ ಮೂಲಕ ಮಕ್ಕಳಿಗೆ ವಿದ್ಯೆ ಹೇಳಿಕೊಡುತ್ತಾರೆ. ಇದು ಸಹಜ ಪ್ರಕ್ರಿಯೆ. ಆದರೆ ನಲಿಫ್ಕಲಿ ಸಂಪೂರ್ಣ ವಿಭಿನ್ನ. ಶಿಶುಕೇಂದ್ರಿತ, ಚಟುವಟಿಕೆ ಆಧಾರಿತ, ಸ್ವಕಲಿಕೆ, ಸಂತಸದ ಕಲಿಕೆಗೆ ಒತ್ತು ಕೊಡುವ ವಿಶಿಷ್ಟ ಪದ್ಧತಿಯಿದು. ಇದರಲ್ಲಿ ಪಠ್ಯಪುಸ್ತಕಗಳು ಇರುವುದಿಲ್ಲ, ಬದಲಿಗೆ ಕಲಿಕಾ ಸಾಮಗ್ರಿಗಳು ಇರುತ್ತವೆ. ಇದರಲ್ಲಿ ಉಪಯೋಗಿಸುವ ಕಾರ್ಡ್ ಮತ್ತಿತರ ವಸ್ತುಗಳನ್ನು ಹೊರಗಿನಿಂದ ತರುವುದಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಯಾರಿಸುತ್ತಾರೆ. ಬೇಕಾಗುವ ವಸ್ತುಗಳ ಬಗ್ಗೆ, ಕಲಿಸುವ ವಿಧಾನಗಳನ್ನು ದೀರ್ಘ ಚರ್ಚೆ ಮಾಡುತ್ತಾರೆ. ಅನುಕೂಲ, ಅನಾನುಕೂಲಗಳನ್ನೂ ಗಮನದಲ್ಲಿಟ್ಟುಕೊಳ್ಳುತ್ತಾರೆ.
ಏಕಕಾಲದಲ್ಲಿ ಅನುಷ್ಠಾನವಾಗಿಲ್ಲ
ಲಿ-ಕಲಿ ಪದ್ಧತಿ ರಾಜ್ಯದೆಲ್ಲೆಡೆ ಒಂದೇ ಬಾರಿಗೆ ಅನುಷ್ಠಾನವಾಗಿಲ್ಲ. 1995-96ನೇ ಸಾಲಿನಿಂದ ಹಂತಹಂತವಾಗಿ ಶಾಲೆಗಳಲ್ಲಿ ಅಳವಡಿಸಲಾಗುತ್ತಿದೆ. 2009-10ರಲ್ಲಿ ಎಲ್ಲ ಶಾಲೆಗಳಲ್ಲಿ ಅನುಷ್ಠಾನವಾದರೂ 1 ಮತ್ತು 2ನೇ ತರಗತಿಗೆ ಮಾತ್ರ ಅಳವಡಿಸಲಾಗಿತ್ತು. ನಂತರ 2010-11ರಿಂದ 3ನೇ ತರಗತಿಗೂ ವಿಸ್ತರಿಸಲಾಗಿದೆ. 3ನೇ ತರಗತಿಗೆ ಅಳವಡಿಸಿದ ನಂತರವೇ ಅಪಸ್ವರ ಎದ್ದಿದ್ದು. ಈ ನಲಿಫ್ಕಲಿ ಪದ್ಧತಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಬಹುತೇಕ ರಾಜ್ಯಗಳಲ್ಲೂ ಇದೆ. ಆದರೆ ಬೇರೆ ಬೇರೆ ಹೆಸರಿನಲ್ಲಿದೆ. ಇದನ್ನು ಯುನಿಸೆಫ್ ಕೂಡ ಒಪ್ಪಿಕೊಂಡಿದೆ.
ಪದ್ಧತಿಯ ಉದ್ದೇಶ
ಮಕ್ಕಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಆಧಾರದ ಮೇಲೆ, ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯನ್ನಿಟ್ಟುಕೊಂಡು ಲಿ-ಕಲಿ ಜನ್ಮತಾಳಿದೆ. ಬಹುವರ್ಗ, ಬಹುಹಂತದ ಕಲಿಕೆ, ಕಲಿಕಾಂಶಗಳು, ಲೋಗೋ, ಕಾರ್ಡ್, ಅಭ್ಯಾಸ ಪುಸ್ತಕ, ವಾಚಕ, ಮೆಟ್ಟಿಲು, ಪ್ರಗತಿನೋಟ, ಗುಂಪುರಚನಾ ತಟ್ಟೆ, ವಿದ್ಯಾರ್ಥಿಯ ಕಪ್ಪುಹಲಗೆ, ಹವಾಮಾನ ನಕ್ಷೆ, ಕಲಿಕಾ ಚಪ್ಪರಗಳನ್ನು ಒಳಗೊಂಡಿದೆ. ಈ ಪದ್ಧತಿಯಲ್ಲಿ ಶಿಕ್ಷಕರಿಗೆ ಪ್ರತಿವರ್ಷ ತರಬೇತಿ ನೀಡಲಾಗುತ್ತದೆ. ಅನುಭವ ಹಂಚಿಕೆ ಕಾರ್ಯಾಗಾರ ನಡೆಸಲಾಗುತ್ತದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಸಹಾಯವಾಣಿಗಳಿಂದ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ. ಸಿಆರ್‌ಜಿ, ಬಿಆರ್‌ಜಿ ಮತ್ತು ಡಿಆರ್‌ಜಿ ಸಭೆಗಳನ್ನು ನಡೆಸಿ ಕಾರ್ಯತಂತ್ರ ರೂಪಿಸಲಾಗುತ್ತದೆ.
ನಲಿ-ಲಿ ಪದ್ಧತಿ ಸ್ವರೂಪ
ನಲಿ-ಕಲಿ 1, 2 ಹಾಗೂ 3ನೇ ತರಗತಿಗಳನ್ನು ಒಳಗೊಂಡ ಬಹುವರ್ಗ ಬೋಧನೆ. ಇಲ್ಲಿ ಒಂದು ಗುಂಪಿನ ಗರಿಷ್ಠ ಮಕ್ಕಳ ಸಂಖ್ಯೆ 30. ಸ್ವವೇಗ, ಬಹುವರ್ಗ, ಬಹುಹಂತ, ಸಾಮರ್ಥ್ಯ ಆಧಾರಿತ, ಚಟುವಟಿಕೆ ಆಧಾರಿತ, ಸಹಭಾಗಿತ್ವ ಕಲಿಕೆ ಎಂಬ ಮೂಲ ತಳಹದಿಯನ್ನಿಟ್ಟುಕೊಂಡು ನಲಿಫ್ಕಲಿ ರೂಪುಗೊಂಡಿದೆ. ವಿವಿಧ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಉತ್ತಮಗೊಳಿಸಬಹುದು. ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾರಂಭವಾಗುವ ಕಲಿಕೆಯು ಸಹಪಾಠಿಗಳ ನೆರವಿನಿಂದ ಬಲಗೊಳ್ಳುವುದು.
ಸರ್ಕಾರಿ ಶಾಲೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿರುತ್ತವೆ. ಅಲ್ಲಿನ ಪಾಲಕರಿಗೆ ನಲಿಫ್ಕಲಿ ಬಗ್ಗೆ ಸರಿಯಾದ ಮಾಹಿತಿಯಾಗಲಿ, ತಿಳಿವಳಿಕೆಯಾಗಲಿ ಇರುವುದಿಲ್ಲ. ಪಠ್ಯಪುಸ್ತಕ ಇಲ್ಲದ, ಬರೀ ಹಾಡು, ಕುಣಿತವಿರುವ ಈ ಪದ್ಧತಿಯಿಂದ ನಮ್ಮ ಮಕ್ಕಳಿಗೆ ಏನೂ ಪ್ರಯೋಜನವಿಲ್ಲ. ಎಲ್ಲ ರೀತಿಯ ಪ್ರಯೋಗಗಳಿಗೆ ಸರ್ಕಾರಿ ಶಾಲೆ ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಇದು ಸರಿಯಲ್ಲ.
| ಚಂದ್ರು, ಹೊಸಪೇಟೆಬೆಂಗಳೂರು
ಭಾಗದಲ್ಲಿರುವ ಸರ್ಕಾರಿ ಶಾಲೆಯಲ್ಲಿ 1,095 ಮಕ್ಕಳಿದ್ದಾರೆ. ಇದರಲ್ಲಿ 350ಕ್ಕೂ ಹೆಚ್ಚು ಮಕ್ಕಳು ನಲಿ-ಕಲಿ ವಿಭಾಗದಲ್ಲಿದ್ದು 8 ಕೊಠಡಿಗಳಲ್ಲಿ ಕಲಿಸಲಾಗುತ್ತದೆ. ಪಾಲಕರಿಗೆ ಅವರ ಮಗುವಿನ ಕಲಿಕೆ ಹೇಗಿದೆ, ಕೊರತೆ ಏನು, ಅದನ್ನು ಸರಿಪಡಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಿದ್ದೇವೆ. ಯಾವಾಗ ಬೇಕಾದರೂ ಶಾಲೆಗೆ ಬಂದು ತಮ್ಮ ಮಗುವಿನ ಕಲಿಕಾಮಟ್ಟ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯಾಸ ಪುಸ್ತಕ, ವಾಚಕ, ನೋಟ್ ಪುಸ್ತಕಗಳನ್ನು ಮನೆಗೊಯ್ಯಲು ಕೊಡುವುದರಿಂದ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ. ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಶಾಲೆಯೇ ಒದಗಿಸುವುದರಿಂದ ನಮಗೆ ಹೊರೆ ಕಡಿಮೆ ಆಗಿದೆ ಎಂದು ಪಾಲಕರೇ ಹೇಳಿದ್ದಾರೆ.
| ಪ್ರೀತಿ ಹೆಗಡೆ, ನಲಿಫ್ಕಲಿ ಸಂಪನ್ಮೂಲ ವ್ಯಕ್ತಿ
ನಲಿ-ಲಿ ಮೂಲಕ ಮಕ್ಕಳಲ್ಲಿ ಸಹಕಾರ, ನಾಯಕತ್ವ, ಪ್ರಶ್ನಿಸುವ, ಚರ್ಚಿಸುವ ಮನೋಭಾವಗಳಂಥ ಮೌಲ್ಯಗಳನ್ನು ಬೆಳೆಸಲಾಗುತ್ತದೆ. ಇದು ಕೇವಲ ಅಕ್ಷರ ಜ್ಞಾನವನ್ನು ಕೊಡುತ್ತಿಲ್ಲ. ಜತೆಗೆ ಕೌಶಲ, ಮೌಲ್ಯ, ಸೃಜನಶೀಲತೆಯನ್ನು ಬೆಳೆಸುತ್ತಿದೆ. ಅವರ ಭಾವಿ ಜೀವನಕ್ಕೆ ಅಗತ್ಯವಿರುವ ಅನೇಕ ಅಂಶಗಳನ್ನು ಕಲಿಸುತ್ತಿದೆ. ಶಿಕ್ಷಕರು, ಪಾಲಕರು, ಮಕ್ಕಳಿಗೆ ವರದಾನವಾಗಿದೆ.
| ಆರ್.ಡಿ. ರವೀಂದ್ರ, ರಾಜ್ಯ ಸಂಪನ್ಮೂಲ ವ್ಯಕ್ತಿ
ಮಕ್ಕಳಿಗೇನು ಅನುಕೂಲ?
ಹಿಂದೆಲ್ಲ ಕಲಿಕೆಯಲ್ಲಿ ಹಿಂದಿರಲಿ, ಚುರುಕಿರಲಿ; ಎಲ್ಲ ಮಕ್ಕಳನ್ನೂ ಒಂದೆಡೆ ಸೇರಿಸಿ ಪಾಠ ಹೇಳಲಾಗುತ್ತಿತ್ತು. ಆದರೆ ಈ ವಿಧಾನದಲ್ಲಿ ಅವರವರ ಕಲಿಕಾ ವೇಗಕ್ಕೆ ತಕ್ಕಂತೆ ಅವಕಾಶ ನೀಡುತ್ತಾರೆ. ಇದು ಮಕ್ಕಳ ಮೇಲೆ ಸ್ವಲ್ಪ ಋಣಾತ್ಮಕ ಪರಿಣಾಮವನ್ನೂ ಬೀರಬಹುದು. ಆದರೆ ಕಲಿಕೆ ಗಟ್ಟಿಯಾಗುತ್ತದೆ. ಪ್ರತಿಯೊಂದನ್ನೂ ಅನುಭವಾತ್ಮಕವಾಗಿ ಕಲಿಯಬಹುದು. ಹಾಗೆ ಕಲಿತಿದ್ದು ಅವರ ಮನಸ್ಸಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಕ್ಕಳು ತಮ್ಮ ಪ್ರಗತಿಯನ್ನು ತಾವೆ ಪಾರದರ್ಶಕವಾಗಿ ನೋಡಬಹುದು. ಸಾಧನೆ, ಕೊರತೆ, ಹೋಲಿಕೆಗೆ ಅವಕಾಶವಿದೆ. ಪರೀಕ್ಷೆಗಳ ಭಯವಿಲ್ಲದೆ ಆಟ, ಚಟುವಟಿಕೆಯೊಂದಿಗೆ ಕಲಿಯಲು ಈ ಪದ್ಧತಿ ಉತ್ತಮ.
ಶಿಕ್ಷಕರಿಗೇನು ಅನುಕೂಲ?
ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಹೇಳುವ ಪ್ರಕಾರ ನಲಿಫ್ಕಲಿ ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿದೆ. ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ. ಚಟುವಟಿಕೆಗಳ ವಿಂಗಡಣೆ ಮೊದಲೇ ನಿರ್ಧಾರವಾಗುವುದರಿಂದ ಆಯ್ಕೆಯಲ್ಲಿ ಗೊಂದಲವಾಗುವುದಿಲ್ಲ. ಅದಕ್ಕೆ ಬೇಕಾದ ಸಾಮಗ್ರಿಗಳನ್ನೂ ಮೊದಲೇ ಸಿದ್ಧಪಡಿಸುವುದರಿಂದ ಸಮಸ್ಯೆಯಾಗುವುದಿಲ್ಲ. ಪ್ರಗತಿಯ ಹೋಲಿಕೆ ಅಲ್ಲಲ್ಲಿಯೇ ನಡೆಯುವುದರಿಂದ ಸಾಧಕ, ಬಾಧಕಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ. ಪಾಠ, ಟಿಪ್ಪಣಿಗೆ ವಿನಾಯಿತಿ ಇರುವುದರಿಂದ ಸಮಯವೂ ಉಳಿಯುತ್ತದೆ. ದಾಖಲೀಕರಣಕ್ಕೆ ಹೆಚ್ಚು ಒತ್ತು ನೀಡದೆ, ಕಲಿಕೆಗೆ ಅವಕಾಶ ನೀಡಲಾಗಿದೆ. ಮೊದಲು ಶಿಕ್ಷಕರಿಗೆ ಚಟುವಟಿಕೆಯ ಆಧಾರದ ಮೇಲೆ ಕಲಿಸಲು ಸೂಚಿಸಲಾಗುತ್ತಿತ್ತು. ಆ ಚಟುವಟಿಕೆಗಳ ಆಯ್ಕೆಯನ್ನು ಶಿಕ್ಷಕರಿಗೇ ಬಿಟ್ಟಿದ್ದರಿಂದ ಅದು ಹೊರೆಯಾಗುತ್ತಿತ್ತು. ಆದರೆನಲಿಫ್ಕಲಿಯಲ್ಲಿ ಪ್ರತಿ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಹಾಗಾಗಿ ಶಿಕ್ಷಕರಿಗೆ ಸುಲಭವಾಗುತ್ತದೆ. ಅಷ್ಟೇ ಏಕೆ ನಲಿಫ್ಕಲಿ ಕೊಠಡಿಯನ್ನು ಒಂದು ಪುಟ್ಟ ಶೈಕ್ಷಣಿಕ ವಸ್ತು ಸಂಗ್ರಹಾಲಯದಂತೆ ಸಿದ್ಧಪಡಿಸುವುದರಿಂದ ಶಾಲೆಗಳ ಸೌಂದರ್ಯವೂ ಹೆಚ್ಚಿದೆ. ಕಲಿಕೆಗೆ ಪೂರಕ ವಾತಾವಾರಣ ನಿರ್ಮಾಣವಾಗಿದೆ ಎನ್ನುತ್ತಾರೆ ರವೀಂದ್ರ.
ಬಾಧಕಗಳೇನು?
ನಲಿಫ್ಕಲಿ ಬೋಧನಾ ಪದ್ಧತಿಯಲ್ಲಿ ಖಂಡಿತ ದೋಷಗಳಿಲ್ಲ. ಆದರೆ ಅದರ ಅನುಷ್ಠಾನ ಮತ್ತು ಅದಕ್ಕೆ ನೀಡಬೇಕಾದ ಸೌಲಭ್ಯಗಳಲ್ಲಿ ದೋಷಗಳಿವೆ. ಪ್ರತಿವರ್ಷ ಮಕ್ಕಳಿಗೆ ತಲುಪಲೇಬೇಕಾದ ಪ್ರಗತಿನೋಟ, ಕಾರ್ಡ್‌ಗಳು ಶಾಲೆಗೆ ಸರಿಯಾದ ಸಮಯಕ್ಕೆ    ತಲುಪುತ್ತಿಲ್ಲ. ನಲಿಫ್ಕಲಿಯಲ್ಲಿ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಎಂಬ ನಿಯಮವಿದೆ. ಆದರೆ ಮೂರು ತರಗತಿ ಮಕ್ಕಳನ್ನು ಸೇರಿಸಿದರೆ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿ ಸ್ವಲ್ಪ ತೊಡಕಾಗುತ್ತದೆ. ಇಂದಿಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲ. ಹಲವು ಕಡೆ 50ರಿಂದ 120 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದಾರೆ. ಶಿಕ್ಷಕರಿಗೆ ಮಕ್ಕಳ ಬಗ್ಗೆ ವೈಯಕ್ತಿಕ ಗಮನ ಹರಿಸಲು ಆಗುತ್ತಿಲ್ಲ. ಕೆಲವು ಶಾಲೆಗಳಲ್ಲಿ 3ನೇ ತರಗತಿ ಮಕ್ಕಳು 1ಮತ್ತು 2ನೇ ತರಗತಿ ಮಕ್ಕಳೊಂದಿಗೆ ಕುಳಿತುಕೊಳ್ಳಲು ಒಪ್ಪುವುದಿಲ್ಲ. ಅಲ್ಲದೆ 3ನೇ ತರಗತಿಗೆ ಕಲಿಕಾ ಸಾಮಗ್ರಿಗಳು ಹೆಚ್ಚಾಗಿರುವುದರಿಂದ ಅಲ್ಲಿ ಗಮನ ಕೊಡುತ್ತಿದ್ದರೆ ಉಳಿದೆರಡು ತರಗತಿಗಳ ಬಗ್ಗೆ ಗಮನ ಹರಿಸಲಾಗುವುದಿಲ್ಲ. ಅಷ್ಟೇ ಅಲ್ಲ ಶಿಕ್ಷಕರಿಗೆ ವಿದ್ಯಾರ್ಥಿವೇತನ, ಬಿಸಿಯೂಟ, ಗಣತಿ, ಚುನಾವಣೆ ಸೇರಿದಂತೆ ಅನ್ಯ ಕೆಲಸಗಳನ್ನು ನೀಡುತ್ತಿರುವುದರಿಂದ ನಲಿಫ್ಕಲಿಯಲ್ಲಿ ಸಂಪೂರ್ಣವಾಗಿ ತೊಡಗಲೂ ಕಷ್ಟವಾಗುತ್ತಿದೆ. ಈ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಆಕ್ಷೇಪಣೆಗಳು ತಲೆ ಎತ್ತಿವೆ.
ಸರಿಯಾದ ನಿರ್ಧಾರವಾಗಲಿ
ನಲಿ-ಕಲಿ ಒಳ್ಳೆಯ ಯೋಜನೆ. ಆದರೆ ಅದನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಲು ಸ್ಪಲ್ಪ ಎಡವುತ್ತಿದ್ದಾರೆ. ಈ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು, ಶಿಕ್ಷಕ ಸಂಘ, ಶಿಕ್ಷಣ ಪ್ರೇಮಿಗಳು, ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರಬೇಕು. ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಇರುವ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಬಾಧಕಗಳೇ ಹೆಚ್ಚಾಗಿ ಬಾಧಿಸಿ ಈ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬ ತೀರ್ಮಾನಕ್ಕೆ ಬರುವುದಾದರೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಆಗ ಇದಕ್ಕಿಂತ ಉತ್ತಮ ವಿಧಾನವನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಸರ್ಕಾರದ ಮೇಲೆ ಬೀಳುತ್ತದೆ. ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನ್ಯಾಯವಾಗಬಾರದು.

No comments:

Post a Comment